ದೊಡ್ಡಬಳ್ಳಾಪುರ: ವಾಕಿಂಗ್ ಮಾಡುತ್ತಿದ್ದ ವೃದ್ಧೆಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪತ್ತೆ ಮಾಡಿದ್ದು, ಕಳುವಾದ ಸರವನ್ನು ಮಹಿಳೆಗೆ ಇನ್ಸ್‌ಪೆಕ್ಟರ್ ಸಾಧಿಕ್ ಪಾಷ ಅವರು ವಾಪಸ್ ನೀಡಿದ್ದಾರೆ. ಪೊಲೀಸರ ಕಾರ್ಯಕ್ಕೆ ವೃದ್ಧೆ ಕೃತಜ್ಞತೆ ಸಲ್ಲಿಸಿದ್ದಾರೆ.
2024ರ ಸೆಪ್ಟೆಂಬರ್ 19ರಂದು ಗುಂಜೂರು ಗ್ರಾಮದ ಶೈಲಜಾ ಎಂಬ ವೃದ್ಧೆ ಬೆಳಗ್ಗೆ ಹೆದ್ದಾರಿಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಕೆಂಪು ಬಣ್ಣದ ಶಿಫ್ಟ್ ಕಾರ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ವೃದ್ಧೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಆರೋಪಿ ಕೆಂಪು ಬಣ್ಣದ ಜರ್ಕಿನ್, ಕಪ್ಪುಬಣ್ಣದ ಪ್ಯಾಂಟುಗಳನ್ನು ಧರಿಸಿರುತ್ತಾನೆಂಬ ಮಾಹಿತಿಯನ್ನು ಮಹಿಳೆ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬೆನ್ನತ್ತ ಪೊಲೀಸರು ಆತನನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳವು ಮಾಡಲಾದ ಚಿನ್ನದ ಸರವನ್ನ ಕಳ್ಳನಿಂದ ಪಡೆದ ಪೊಲೀಸರು ಮತ್ತೆ ವೃದ್ಧೆಗೆ ವಾಪಸ್ ಮಾಡಿದ್ದಾರೆ.
PublicNext
04/12/2024 10:16 pm