ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ವಿವೇಕಾನಂದ ಮಹಿಳಾ ಕಾಲೇಜ್ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಸಂಭ್ರಮ

ಬೆಂಗಳೂರು : ಬೆಂಗಳೂರಿನ ವಿವೇಕಾನಂದ ಮಹಿಳಾ ಕಾಲೇಜಿ, ಜನತಾ ಶಿಕ್ಷಣ ಸಂಸ್ಥೆಯ ವಿದ್ಯಾಲಯದಲ್ಲಿ ನಿನ್ನೆ ವಾರ್ಷಿಕೋತ್ಸವ ಸಂಭ್ರಮ ನಡೆಯಿತು. ರಾಜಾಜಿನಗರ ಸುತ್ತಮುತ್ತಲಿನಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಇರುವ ಕಾಲೇಜ್ ಇದೊಂದೇ. ಬಡ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಈ ಕಾಲೇಜ್ ಹೆಚ್ಚು ಹೊತ್ತು ನೀಡುತ್ತಿದ್ದು, ನಿನ್ನೆ ಬೆಂಗಳೂರಿನ ಡಾಕ್ಟರ್ ರಾಜಕುಮಾರ್ ಒಳಾಂಗಣ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ವಿವೇಕಾನಂದ ಮಹಿಳಾ ಕಾಲೇಜು ವಾರ್ಷಿಕೋತ್ಸವದಲ್ಲಿ, ಮುಖ್ಯ ಅತಿಥಿಗಳಾಗಿ ಮಹಾಲಕ್ಷ್ಮಿಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಯ್ಯನವರು, ನಟಿ ತಾರಾ, ಹಾಸ್ಯ ಕಲಾವಿದ ರಾಘವೇಂದ್ರ, ಗಿಚ್ಚಿ ಗಿಲಿ ಗಿಲಿ ವಿಜೇತನಾದ ಹುಲಿ ಕಾರ್ತಿಕ್, ಖ್ಯಾತ ಗಾಯಕ ಕಂಬದ ರಂಗಯ್ಯ ಅವರು ಭಾಗಿಯಾಗಿದ್ದರು. ಹಾಗೂ ಕಾಲೇಜಿನ ಮಾಜಿ ಕುಲಪತಿಗಳಾದ ನಾರಾಯಣ ರೆಡ್ಡಿ, ಗೌರವ ಕಾರ್ಯದರ್ಶಿಗಳಾದ ಬಾಲ ಗೋಪಾಲ್ ಅವರು ಹಾಗೂ ಕಾಲೇಜಿನ ಚೇರ್ಮನ್ ಕೆ ಪಿ ಮಂಜು ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನಾಡಗೀತೆಯಿಂದ ಶುರುವಾದ ಈ ಕಾರ್ಯಕ್ರಮ, ವಿವೇಕಾನಂದ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದರು. ಕಲ್ಚರಲ್ ಸ್ಪೋರ್ಟ್ಸ್ ಹಾಗೂ ಅಕಾಡೆಮಿಕ್ಸ್ ಎಲ್ಲದರಲ್ಲೂ ಮುಂಚಣೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಟ್ರೋಫಿ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಿದರು.

ಬಳಿಕ, ಮುಖ್ಯ ಅತಿಥಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿ ಪಬ್ಲಿಕ್ ನೆಕ್ಸ್ಟ್ ಒಂದಿಗೆ ವಾರ್ಷಿಕೋತ್ಸವದ ಬಗ್ಗೆ ಮಾತನಾಡಿದರು.

ಒಟ್ಟಾರೆ ಶುಕ್ರವಾರ ನಡೆದ ವಿವೇಕಾನಂದ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ವಿಜೃಂಭಣೆಯಿಂದ ಯಶಸ್ವಿಯಾಗಿದ್ದು, ಮಹಿಳೆಯರಿಗೆ ಒಳ್ಳೆ ಜೀವನ ಕಟ್ಟಿಕೊಡಲು ಹಾಗೂ ಹಲವಾರು ಅವಕಾಶಗಳನ್ನು ನೀಡುತ್ತಿರುವ ಈ ಕಾಲೇಜ್ ಇನ್ನಷ್ಟು ಯಶಸ್ಸು ಕಾಣಲಿ ಎಂಬುದೇ ನಮ್ಮ ಆಶಯ.

Edited By : Somashekar
PublicNext

PublicNext

07/12/2024 05:50 pm

Cinque Terre

20.59 K

Cinque Terre

0