ಆನೇಕಲ್: 1ನೇ ತರಗತಿ ವಿದ್ಯಾರ್ಥಿಯೊಬ್ಬ ಸಂವಿಧಾನದ ಪೀಠಿಕೆ ಬೋಧಿಸುವ ವಿಡಿಯೋ ವೈರಲ್ ಆಗಿದೆ. ಪುಟ್ಟ ವಯಸ್ಸಿನಲ್ಲಿಯೇ ಸಂವಿಧಾನದ ಪೂರ್ಣ ಪೀಠಿಕೆ ಮನನ ಮಾಡುವ ಶೈಲಿಗೆ ಜನ ಫಿದಾ ಆಗಿದ್ದಾರೆ. ಚಿಂತಲ ಮಡಿವಾಳ ಸರ್ಕಾರಿ ಶಾಲೆ ವಿದ್ಯಾರ್ಥಿ ನವನೀತ್‌ರ ವಿಡಿಯೋ ವೈರಲ್ ಆಗ್ತಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಚಿಂತಲ ಮಡಿವಾಳ ಇರುವುದು. ನಿತ್ಯ ಸಹಪಾಠಿಗಳಿಗೆ ಸಂವಿಧಾನದ ಪೀಠಿಕೆ ಬೋಧಿಸುವ ವಿದ್ಯಾರ್ಥಿ ನವನೀತ್ ಸ್ಮರಣಶಕ್ತಿಗೆ ಶಿಕ್ಷಕರ ಪ್ರಶಂಸೆ ವ್ಯಕ್ತ ಆಗಿದೆ.
PublicNext
07/12/2024 12:43 pm