ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉಪ ಕುಲಪತಿ ನೇಮಕ ವಿಚಾರ: ಸರ್ಕಾರದ ನಿರ್ಲಕ್ಷ್ಯ ಬೇಸತ್ತ ವಿದ್ಯಾರ್ಥಿಗಳು, ಉಪನ್ಯಾಸಕರು

ಬೆಂಗಳೂರು: ಒಡೆಯನಿಲ್ಲದ ಮನೆಯಂತಾಗಿರುವ ಬೆಂಗಳೂರು ವಿವಿಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಿಸುತ್ತಿದೆ ಎನಿಸುತ್ತಿದೆ. ಕುಲಪತಿ ಹುದ್ದೆ ಖಾಲಿಯಾಗಿ ವಾರಗಳೇ ಕಳೆದರೂ ಆ ಹುದ್ದೆಗೆ ಸಮರ್ಥರನ್ನು ನೇಮಕ ಮಾಡದೆ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿರುವ ಉಪನ್ಯಾಸಕರು, ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ತುಳಿಯಲು ಮುಂದಾಗಿದ್ದಾರೆ.

ಈ ವಾರದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡದಿದ್ದರೆ ಯೂನಿವರ್ಸಿಟಿಯನ್ನೇ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕುಲಪತಿಗಳಿಲ್ಲದೆ ಆಡಳಿತಾತ್ಮಕವಾಗಿ ಎಷ್ಟೋ ನಿರ್ದಾರಗಳು ಹಾಗೆಯೇ ಉಳಿದಿವೆ.ಸಾಕಷ್ಟು ಕೆಲಸಗಳು ಬಾಕಿ ಇವೆ. ಮುಂದಿನ ತಿಂಗಳು ಘಟಿಕೋತ್ಸವ ಇದೆ. ರಾಷ್ಟ್ರೀಯ ಅಂತರಾಷ್ಟ್ರೀಯ ಸೆಮಿನಾರ್‌ಗಳು ನಡೆಯುವುದಿದೆ. ಆದರೆ ಇದೆಲ್ಲದರ ಉಸ್ತುವಾರಿ ಮಾಡಲು ಕುಲಪತಿಗಳೇ ಇಲ್ಲವಾಗಿದೆ. ಈ ಬಗ್ಗೆ ಪರೋಕ್ಷವಾಗಿ ಕುಲಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

28/03/2022 08:33 pm

Cinque Terre

29.32 K

Cinque Terre

0

ಸಂಬಂಧಿತ ಸುದ್ದಿ