ಬೆಂಗಳೂರು: ಶಾಲಾ- ಕಾಲೇಜು ಆರಂಭವಾಗಿ ಕೆಲ ತಿಂಗಳಷ್ಟೇ ಆಗಿವೆ. ಆದರೆ, ಮತ್ತೆ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ!
ಹೌದು...ಕಳೆದ ಎರಡು ವರ್ಷಗಳಿಂದ ಭೌತಿಕ ತರಗತಿ ನಡೆಯದೇ ಶಾಲೆ ಬಂದ್ ಆಗಿತ್ತು.
ಆದ್ರೆ, ಕಳೆದ ಮೂರು- ನಾಲ್ಕು ತಿಂಗಳಿನಿಂದ ಹಂತ ಹಂತವಾಗಿ ಶಾಲೆ ಪ್ರಾರಂಭ ಮಾಡಲಾಯಿತು.
ನವೆಂಬರ್ 8 ರಿಂದ UKG ಹಾಗೂ LKG ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಶಾಲೆ ಪ್ರಾರಂಭವಾಗಿತ್ತು.
ಪೂರ್ಣ ಪ್ರಮಾಣದ ಶಾಲೆ ಪ್ರಾರಂಭದ ಬೆನ್ನಲ್ಲೇ 'ಮತ್ತೆ ಬಂದ್ ಆಗುತ್ತಾ ಶಾಲೆ!?' ಎಂಬ ಪ್ರಶ್ನೆ ಪೋಷಕರಲ್ಲಿ ಮೂಡಿದೆ.
ಕೊರೊನಾ ಹೊಸ ತಳಿ ಒಮಿ ಕ್ರಾನ್ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿದೇಶದಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲೂ ಒಮಿಕ್ರಾನ್ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಆದರೆ, ಮಕ್ಕಳ ಭವಿಷ್ಯಕ್ಕೆ ಮತ್ತೆ ಇದು ಮಾರಕ ಆಗುವ ಭೀತಿ ಬಗ್ಗೆ ಖಾಸಗಿ ಶಿಕ್ಷಣ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.
Kshetra Samachara
29/11/2021 02:34 pm