ಯಲಹಂಕ: ಮಾರಸಂದ್ರ ಬಳಿಯ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ ಮೆಂಟ್ ನಲ್ಲಿ ರಥಯಾತ್ರಾ ಸಂಭ್ರಮ. ಪುರಿಜಗನ್ನಾಥದಲ್ಲಿ ನಡೆಯುವಂತೆ ಅಪಾರ್ಟ್ ಮೆಂಟ್ ನಲ್ಲಿ ರಥಯಾತ್ರಾ ಮಾಡುವ ಮೂಲಕ ಅಪಾರ್ಟ್ ಮೆಂಟ್ ನಿವಾಸಿಗಳು ಭಕ್ತಿ ತೊರಿದ್ದಾರೆ.
ಮಾರಸಂದ್ರ ಬಳಿಯ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ ಮೆಂಟ್ ನಲ್ಲಿ 3 ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿ ಉತ್ತರ ಭಾರತೀಯ ಕುಟುಂಬಗಳು ವಾಸವಾಗಿವೆ.
ಒರಿಸ್ಸಾದ ಪುರಿಜಗನ್ನಾಥ ದೇವಸ್ಥಾನದಲ್ಲಿ ನಡೆಯುವ ರಥಯಾತ್ರೆಯಂತೆ ಅಪಾರ್ಟ್ ಮೆಂಟ್ ನಲ್ಲಿ ಪುರಿಜಗನ್ನಾಥ,ಶ್ರೀನಿವಾಸ ಮತ್ತು ಕೃಷ್ಣನ ಮೂರ್ತಿಗಳನ್ನ ರಥದಲ್ಲಿ ಇಟ್ಟು ಮೆರವಣಿಗೆ ನಡೆಸಿದರು.ಇನ್ನು ರಥಯಾತ್ರೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ರಥ ಎಳೆಯುವ ಮೂಲಕ ದೇವರ ಭಕ್ತಿಗೆ ಪಾತ್ರರಾದರು.
5 ವರ್ಷಗಳ ಹಿಂದೆ ಅಪಾರ್ಟ್ ಮೆಂಟ್ ನಲ್ಲಿ ರಥಯಾತ್ರೆ ಕಾರ್ಯಕ್ರಮ ಪ್ರಾರಂಭ ಮಾಡಲಾಗಿತ್ತು, ಆದರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಈ ಕಾರ್ಯಕ್ರಮ ಮಾಡಿರಲಿಲ್ಲ. ಈ ಬಾರಿ ಅದ್ದೂರಿಯಾಗಿ ರಥಯಾತ್ರೆ ಮಾಡಲಾಗಿದೆ ಎಂದು ಭಕ್ತರು ತಮ್ಮ ಅಭಿಪ್ರಾಯ ಹಂಚಿಕೊಂಡರು.
Kshetra Samachara
03/07/2022 08:12 pm