ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯೇಸು ಹೇಳಿದ್ದಕ್ಕೆ ಶಿವಕುಮಾರ ಸ್ವಾಮೀಜಿ ಪುತ್ಥಳಿ ವಿರೂಪ ಮಾಡಿದ್ನಂತೆ.!

ಬೆಂಗಳೂರು: ಶಿವಕುಮಾರ ಸ್ವಾಮೀಜಿ ಪುತ್ಥಳಿ ವಿರೂಪಗೊಳಿಸಿದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಗಿರಿನಗರ ಪೊಲೀಸ್ರು ಆರೋಪಿಯನ್ನ ಬಂಧಿಸಿದ್ದಾರೆ. ರಾಜ್ ಶಿವು ಎಂಬಾತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಕಳೆದ ಶನಿವಾರ ರಾತ್ರಿ ಪುತ್ಥಳಿಗೆ ಹಾನಿ ಮಾಡಲಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಗಿರಿ ನಗರ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನ ಬಂಧಿಸಿದ್ದಾರೆ. ಪೊಲೀಸ್ರ ವಿಚಾರಣೆ ವೇಳೆ ಆರೋಪಿ ಸೈಕೋ‌ ಮನಸ್ಥಿತಿ ರೀತಿ ಉತ್ತರ ನೀಡಿದ್ದಾನೆ.

ಶಿವಕುಮಾರ ಸ್ವಾಮೀಜಿ ಮೂರ್ತಿ ಒಡೆಯಲು ಕನಸನಲ್ಲಿ ಬಂದು ಯೇಸು ಹೇಳಿದರಂತೆ. ಯೇಸು ಹೇಳಿದ್ದಕ್ಕೆ ಶಿವಕುಮಾರ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ್ದೇನೆ ಅಂತ ರಾಜ್ ಶಿವು ಪೊಲೀಸ್ರ ಮುಂದೆ ಹೇಳಿದ್ದಾನಂತೆ. 7 ವರ್ಷಗಳ ಹಿಂದೆ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದ ರಾಜ್ ಶಿವು ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಕನ್ವರ್ಟ್ ಆಗಿದ್ನಂತೆ.

ಹಿಂದೂ ದೇವತೆಗಳು, ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ಮೇಲೆ ದ್ವೇಷ ಸಾಧಿಸುತ್ತಿದ್ನಂತೆ. ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿ ರಾಜ್ ಶಿವು ಕ್ರಿಶ್ಚಿಯನ್ ಗೆ ಮತಾಂತರವಾದ ಮೇಲೆ ಧರ್ಮಾಂಧನಂತೆ ವರ್ತಿಸುತ್ತಿದ್ನಂತೆ. ಹೀಗಾಗಿ ಶಿವಕುಮಾರ ಸ್ವಾಮೀಜಿ ಮೂರ್ತಿಯನ್ನು ಒಡೆಯಲು ಪ್ಲಾನ್ ಮಾಡಿಕೊಂಡು ಶನಿವಾರ ರಾತ್ರಿ ಸುತ್ತಿಗೆ ಸಮೇತ ಬಂದಿದ್ದ ಆರೋಪಿ ರಾತ್ರಿ ಯಾರೂ ಇಲ್ಲದ ವೇಳೆ ಪುತ್ಥಳಿ ವಿರೂಪಗೊಳಿಸಿ ಎಸ್ಕೇಪ್ ಆಗಿದ್ದ. ಇದರ ಜೊತೆಗೆ ಕ್ರೈಸ್ತ ಧರ್ಮದ ಪ್ರಚಾರ ಮಾಡಲು ಭಿತ್ತಿಪತ್ರ ಹಂಚುತ್ತಿದ್ನಂತೆ. ಭಿತ್ತಿ ಪತ್ರದಲ್ಲಿನ ಕೋಡ್ ಸ್ಕ್ಯಾನ್ ಮಾಡಿದ್ರೆ ಬೈಬಲ್ ಸಿಗುವಂತೆ ಭಿತ್ತಿಪತ್ರ ಹಂಚುತ್ತಿದ್ನಂತೆ.

ಸದ್ಯ ಪ್ರಕರಣ ಪುತ್ಥಳಿ ವಿರೂಪಗೊಳಿಸಿದ ಹಿನ್ನೆಲೆ ದಾಖಲಿಸಿಕೊಂಡು ಆರೋಪಿ ರಾಜ್ ಶಿವು ಬಂಧಿಸಿ ಗಿರಿನಗರ ಪೊಲೀಸ್ರು ಜೈಲಿಗಟ್ಟಿದ್ದಾರೆ.

Edited By : Suman K
PublicNext

PublicNext

05/12/2024 12:34 pm

Cinque Terre

20.3 K

Cinque Terre

6

ಸಂಬಂಧಿತ ಸುದ್ದಿ