ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಬಾ ಸಾಹೇಬರ ಪರಿನಿಬ್ಬಾಣ ಹಿನ್ನಲೆ ದೀಪ ಪಥಸಂಚಲನ..!!

ಆನೇಕಲ್: ಜೈ ಭೀಮ್ ಐಕ್ಯತೆ ವೇದಿಕೆ ಮತ್ತು ಪ್ರಗತಿಪರ ಒಕ್ಕೂಟ, ಸಮತಾ ಸೈನಿಕ ದಳ ವತಿಯಿಂದ ಇಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಅಂಗವಾಗಿ ದೀಪ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.

ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ಸಲ್ಲಿಸಲಾಯಿತು. ಬೆಂಗಳೂರಿನ ಬೌದ್ಧ ಧರ್ಮದ ಬಂತಜೆಗಳಾದ ಅನರುದ್ದಿ ಬಂತಜೆಗಳು

ದೀಪ ಪಥಸಂಚಲನಕ್ಕೆ ಚಾಲನೆ ನೀಡಿದರು. ಸೂರ್ಯ ನಗರ ಮುಂಭಾಗದಿಂದ ಹಿಡಿದು ಚಂದಾಪುರದ ಸರ್ಕಲ್‌ವರೆಗೆ ದೀಪ ಪಥಾ ಸಂಚಲನವನ್ನ ಮಾಡಲಾಯಿತು. ಪಥಾ ಸಂಚಲನ ಮುಗಿದ ಬಳಿಕ ಸೂರ್ಯ ನಗರದ ಮುಂಭಾಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬಂತಜ್ಜಿಗಳಿಂದ ಪಂಚಶೀಲ ತತ್ವವನ್ನು ಬೋಧಿಸಲಾಯಿತು. ಇನ್ನು ಇದೇ ವೇಳೆ ಮಾತನಾಡಿದ ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಾವಣ ಮಾತನಾಡಿ ಬುದ್ಧನನ್ನ ನೆನೆಸುತ್ತಾ ಶಾಂತಿಯನ್ನು ನೆನೆಸುತ್ತಾ ಮೇಣದ ದೀಪಗಳನ್ನು ಹಿಡಿದು ಬೆಳಕನ್ನು ನೀಡಿದ್ದೇವೆ. ಬಾಬಾ ಸಾಹೇಬ್ ಹೇಳ್ತಿದ್ರು ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗಬೇಕು ಅಸ್ಪೃಶ್ಯತೆ ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ನಾಯಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಟ್ಟಂತಹ ಮಹಾನ್ ನಾಯಕ ಬಾಬಾ ಸಾಹೇಬರು. ಅಂತಹ ಕಾರ್ಯಕ್ರಮಕ್ಕೆ ಯಾರೆಲ್ಲ ಭಾಗಿ ಆಗಿದ್ದರೋ ಅವರೆಲ್ಲ ಭಾಗ್ಯವಂತರು, ಪುಣ್ಯವಂತರು. ಈ ಜಗತ್ತಿನಲ್ಲಿ ಶ್ರೇಷ್ಠವಾದ ವಕೀಲರಿದರಂತಂದ್ರೆ. ಅದು ಬಾಬಾ ಸಾಹೇಬರೇ. ಹಾಗಾಗಿ ಬಾಬಾ ಸಾಹೇಬ್ರನ್ನ ನೆನೆಯುತ್ತಾ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಇನ್ನು ವಕೀಲರಾದ ಚಕ್ರವರ್ತಿ ಮಾತನಾಡಿ ಬಾಬಾ ಸಾಹೇಬರು ಕೊನೆ ದಿನಗಳಲ್ಲಿ ನನ್ನೆಲ್ಲ ಜೀವನದ ಉದ್ದಕ್ಕೂ ಹೋರಾಟವನ್ನು ಮಾಡುತ್ತಾ ಬಂದಿದ್ದೇನೆ. ಇಲ್ಲಿ ತನಕ ರಥವನ್ನು ಎಳೆದು ತಂದಿದ್ದೇನೆ. ಯಾವುದೇ ಕಾರಣಕ್ಕೂ ಹಿಂದೆ ಬಿಡಬೇಡಿ. ನಿಮ್ಮ ಕೈಲಾಗದಿದ್ದರೆ ಅಲ್ಲೇ ಬಿಡಿ. ಯಾವುದೇ ಕಾರಣಕ್ಕೂ ಇಳಿಯುವ ಕೆಲಸ ಮಾಡಬೇಡಿ. ಕಿವಿ ಮಾತನ್ನ ಹೇಳಿದರು.

ಕಾರ್ಯಕ್ರಮದಲ್ಲಿ ಜನವರಿ 1 ನಡೆಯುವ ಭೀಮ ಕೋರೆಗಾವ್ ವಿಜಯೋತ್ಸವ ಕರಪತ್ರಗಳು ಸಹ ಬಿಡುಗಡೆ ಮಾಡಲಾಯಿತು . ಇನ್ನು ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ಬಂತೇಶಗಳಾದ ಅನಿರುದ್ಧ, ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಾವಣ ವೆಂಕಟೇಶ್ ಮೂರ್ತಿ ನಂದಕುಮಾರ್, ನಾಗರಾಜ್ ಮೌರ್ಯ, ಗೋವಿಂದ ಮೌರ್ಯ, ಗೌರೀಶ್ ಬಾಡ್ರಳ್ಳಿ, ಲೋಕೇಶ್ ಜಿಗಣಿ, ವಿನೋದ್ ಜಿಗಣಿ, ರಾಮಕೃಷ್ಣ ಚಂದಾಪುರ, ಕೃಷ್ಣಮೂರ್ತಿ, ಹೊಸಹಳ್ಳಿ ಅನಿಲ್, ಬೆಳಕು ಸೇವಾಶ್ರಮ ಸುಬ್ಬಲಕ್ಷ್ಮಿ, ವಕೀಲೆ ಜ್ಯೋತಿ ಹಿರಿಯ ಹೋರಾಟಗಾರ್ತಿ ಶಾಂತ ಗಣತಿ, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Edited By : Nagesh Gaonkar
PublicNext

PublicNext

07/12/2024 08:55 am

Cinque Terre

30.31 K

Cinque Terre

0