ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿಂದು ಹಿಂದೂ ಪರ ಸಂಘಟನೆಗಳ ವತಿಯಿಂದ ಶ್ರೀರಾಮ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ಹೊಸಕೋಟೆಯ ವಿವೇಕಾನಂದ ಶಾಲೆಯಿಂದ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಕೋಟೆನ ಸಂಪೂರ್ಣ ಕೇಸರಿಮಯಗೊಳಿಸಿತ್ತು.
ನಾನಾ ಕಲಾ ತಂಡಗಳ ಡಿ.ಜೆ. ಸಹಿತ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನ ಸೆಳೆಯಿತು. ಸಂಜೆ 6 ಗಂಟೆವರೆಗೂ ನಡೆದ ಶೋಭಾಯಾತ್ರೆ ಅದ್ಭುತವಾಗಿ ಮೂಡಿಬಂತು. ಬಂದೋಬಸ್ತ್ ಗಾಗಿ 400 ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿ, ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿತ್ತು.
ಶೋಭಾಯಾತ್ರೆಗೆ ಸಾವಿರಾರು ಸಂಖ್ಯೆಲಿ ಹಿಂದೂ ಸಂಘಟನೆ ಕಾರ್ಯಕರ್ತರು, ಅಭಿಮಾನಿಗಳು ಸಾಕ್ಷಿಯಾದರು. ಮಕ್ಕಳಿಗೆ ಶ್ರೀರಾಮ, ಆಂಜನೇಯ ವೇಷ ಹಾಕಿಸಿ ನಗರದಲ್ಲಿ ಮೆರವಣಿಗೆ ಮಾಡಲಾಯ್ತು. ವೇಷಧಾರಿಗಳು ಭರ್ಜರಿ ಸ್ಟೆಪ್ಸ್ ಹಾಕಿ ರಂಜಿಸಿದರು. ರಸ್ತೆಯುದ್ದಕ್ಕೂ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪರ ಜೈಕಾರ ಕೂಗುತ್ತಾ ಭಕ್ತರು ಸಂಭ್ರಮಿಸಿದರು.
- SureshBabu Public Next ಹೊಸಕೋಟೆ
PublicNext
17/04/2022 10:38 pm