ಬೆಂಗಳೂರು : ಕುಮಾರಸ್ವಾಮಿನ ಕರಿಯ ಅಂದ್ರು ಎಫ್‌ಐ ಆರ್ ಮಾಡ್ಲಿಲ್ಲ..! ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದರು ಕ್ರಮ ಆಗ್ಲಿಲ್ಲ. ಅವ್ರ ಅನುಕೂಲಕ್ಕೆ ತಕ್ಕಂಗೆ ಏನು ಬೇಕೊ ಮಾಡ್ಕೊತವ್ರೆ ನನಗೆ 80 ವರ್ಷ ವಯಸ್ಸಾಗಿದ್ದು ಅನಾರೋಗ್ಯವಾಗಿದೆ. ಎದ್ದೋಳೋದಕ್ಕೆ ಆಗ್ತಿಲ್ಲ, ವೈದ್ಯರು ಬಂದು ಹೋಗಿದ್ದಾರೆ. ನಾನು ವಿಚಾರಣೆಗೆ ಹೋಗ್ತಿಲ್ಲ. ಪೊಲೀಸ್ರು ಬಂದ್ರೆ ಹೇಳಿಕೆ ಕೊಡ್ತೀನಿ ಮಠದಿಂದ ನಾನು ಯಾವ ವಕೀಲರನ್ನು ಇಟ್ಕೊಂಡಿಲ್ಲ. ಇನ್ನೊಂದು ನೋಟಿಸ್ ಬೇಕಾದ್ರು ಕೊಡಲಿ ಅದು ಏನು ಅಂತಾನು ನಮಗೆ ಗೊತ್ತಿಲ್ಲ. ಅವ್ರು ಏನು ಮಾಡ್ತಾರೊ ಮಾಡಿಕೊಳ್ಳಲಿ. ಕ್ಷಮೆ ಕೇಳೋದಕ್ಕೂ ಮೊದಲೆ ಎಫ್ ಐ ಆರ್ ಆಗಿರಲಿಲ್ಲ ಯಾಕೆ ಸುಳ್ಳು ಹೇಳಬೇಕು. ವಿಷಾದ ವ್ಯಕ್ತಪಡಿಸಿದ ಬಳಿಕ ಎಫ್ ಐ ಆರ್ ಮಾಡಿದ್ದಾರೆ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.
ಉಪ್ಪಾರಪೇಟೆ ಪೊಲೀಸರಿಂದ ಚಂದ್ರಶೇಖರ ಸ್ವಾಮೀಜಿಗೆ ನೊಟೀಸ್ ಬಂದ ಹಿನ್ನೆಲೆಯಲ್ಲಿ ಹಾಸಿಗೆ ಮೇಲೆ ಮಲಗಿಕೊಂಡೇ ಸ್ವಾಮಿಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ನೋಟಿಸ್ ಕೊಟ್ಟಿದ್ರು.. ಕ್ಷಮೆ ಕೇಳಿದ ಮೇಲೆ ಕೂಡ ಕೇಸ್ ಮಾಡಿದ್ದಾರೆ. ನನಗೆ ಹುಷಾರಿಲ್ಲ.. ನಡೆಯೋಕೆ ಆಗಲ್ಲ.. ಎಲ್ಲಿಗೂ ತಿರುಗಾಡೋಕೆ ಆಗಲ್ಲ.ಹೀಗಾಗಿ ನನಗೆ ಹೋಗೋದಕ್ಕೆ ಆಗೋದಿಲ್ಲ. ಮಠದವರೆಗೂ ಬಂದು ಪೊಲೀಸರು ನೋಟಿಸ್ ನೀಡಿದ್ರು. ಈ ತರ ಹುಷಾರಿಲ್ಲ ಅಂತಾ ಹೇಳಿದ್ದಿನಿ. ಇಲ್ಲಿಗೆ ಬಂದ್ರೆ ಹೇಳಿಕೆ ಕೊಡ್ತೀನಿ. ಎಂತೆಂಥಾ ವಿಷಯಗಳಲ್ಲಿ ಏನೂ ಮಾಡಲ್ಲ.. ನಮ್ಮ ವಿಚಾರದಲ್ಲಿ ಕೇಸ್ ಮಾಡ್ತಾರೆ ಎಂದು ಚಂದ್ರಶೇಖರ ಸ್ವಾಮೀಜಿ ಪೊಲೀಸ್ ಇಲಾಖೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹೆಚ್‌ಡಿಕೆಗೆ ಕರಿಯ ಅಂದೋರ ಮೇಲೆ ಕ್ರಮ ಇಲ್ಲ.ವಿಧಾನಸೌದದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದ್ರು ಅವ್ರನ್ನ ಏನೂ ಮಾಡಿಲ್ಲ.ನಾನು ಕ್ಷಮೆ ಕೇಳಿದ್ರೂ ಕೂಡ ಈ ರೀತಿ ಕೇಸ್ ಮಾಡಿದ್ದಾರೆ.ಈ ವಯಸ್ಸಲ್ಲಿ ನನಗೆ ಕೇಸ್ ಅಂತಿದ್ದಾರೆ. ಆಗಲಿ ಅವರು ಬಂದು ಕೇಳಿದ್ರೆ ಉತ್ತರ ಕೊಡ್ತೀನಿ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
PublicNext
02/12/2024 01:12 pm