ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ : ಸರಳವಾಗಿ ನಡೆದ ಘಾಟಿ ಸುಬ್ರಮಣ್ಯಸ್ವಾಮಿ ರಥೋತ್ಸವ

ದೊಡ್ಡಬಳ್ಳಾಪುರ : ಅದ್ಧೂರಿ ಮತ್ತು ವಿಜೃಂಭಣೆಯಿಂದ ನಡೆಯುತ್ತಿದ್ದ ಘಾಟಿ ಸುಬ್ರಮಣ್ಯಸ್ವಾಮಿ ರಥೋತ್ಸವ ಇಂದು ಸರ್ಕಾರದ ಆದೇಶದಂತೆ ಸರಳವಾಗಿ ನಡೆಯಿತು

ಘಾಟಿ ಸುಬ್ರಮಣ್ಯಸ್ವಾಮಿ ರಥೋತ್ಸವಕ್ಕೆ ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ಹೊರರಾಜ್ಯದ ಸಾವಿರಾರು ಭಕ್ತರು ಬರುತ್ತಿದ್ದರು, ಆದರೆ ಈ ಬಾರಿ ಕೊರೊನಾ ಮೂರನೇ ಅಲೆಯ ಆತಂಕದ ಹಿನ್ನಲೆ ವಾರಾಂತ್ಯದ ಕರ್ಪ್ಯೂ ಜಾರಿ ಇರುವ ಹಿನ್ನಲೆ ಅದ್ದೂರಿ ರಥೋತ್ಸವಕ್ಕೆ ಬ್ರೇಕ್ ಹಾಕಲಾಗಿದ್ದು, ದೇವಸ್ಥಾನದ ಪ್ರಾಂಗಣದಲ್ಲಿ ಸಾಂಕೇತಿಕವಾಗಿ ಸರಳ ರಥೋತ್ಸವ ಆಚರಿಸಲಾಯಿತು.

ಜಿಲ್ಲಾಡಳಿತದ ಆದೇಶದಂತೆ ದೇವಸ್ಥಾನದ ಸಿಬ್ಬಂದಿ ಮತ್ತು ಆರ್ಚಕರು ಸೇರಿದಂತೆ 50 ಜನರಿಗೆ ಮಾತ್ರ ರಥೋತ್ಸವಕ್ಕೆ ಅವಕಾಶ ನೀಡಲಾಗಿತು, ಆದರೆ ಶಾಸಕರು ಸೇರಿದಂತೆ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಮತ್ತು ಮುಖಂಡರ ಬೆಂಬಲಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಭಾಗವಹಿಸಿದ್ದರು, ಜನಪ್ರತಿನಿಧಿಗಳೇ ಕೋವಿಡ್ ನಿಯಮ ಗಾಳಿಗೆ ತೂರಿ ರಥೋತ್ಸವದಲ್ಲಿ ಭಾಗವಹಿಸಿದರು.

ರಥೋತ್ಸವ ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ, ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ , ಜಿಲ್ಲಾಧಿಕಾರಿ ಕೆ, ಶ್ರೀನಿವಾಸ್ ಭಾಗವಹಿಸಿದರು. ರಥೋತ್ಸವ ನಂತರ ಮಾತನಾಡಿದ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಹಿಂದಿನಿಂದಲೂ ಘಾಟಿ ಸುಬ್ರಮಣ್ಯಸ್ವಾಮಿ ರಥೋತ್ಸವವನ್ನು ಜನರು ಬಹಳ ಅದ್ಧೂರಿಯಿಂದ ಆಚರಿಸುತ್ತಿದ್ದರು, ಆದರೆ ಈ ಬಾರಿ ಅದ್ಧೂರಿ ಆಚರಣೆಗೆ ಕೊರೊನಾ ಮೂರನೇ ಅಲೆಯ ಆತಂಕ ಅವಕಾಶ ನೀಡಿಲ್ಲ ಇದರಿಂದ ಜನರಿಗೂ ಬೇಸರವಾಗಿದೆ, ಮುಂದಿನ ದಿನಗಳಲ್ಲಿ ಕೋವಿಡ್ ವೈರಸ್ ದೇಶದಿಂದ ತೊಲಗಿ ಜನರು ಅದ್ಧೂರಿಯಾಗಿ ರಥೋತ್ಸವ ಆಚರಿಸುವಂತೆ ದೇವರು ಅರ್ಶಿವಾದಿಸಬೇಕೆಂದು ಬೇಡಿಕೊಂಡರು.

Edited By : Nagesh Gaonkar
Kshetra Samachara

Kshetra Samachara

08/01/2022 03:51 pm

Cinque Terre

562

Cinque Terre

0

ಸಂಬಂಧಿತ ಸುದ್ದಿ