ಬೆಂಗಳೂರು: ಆತ ಯಾಕಾಗಿ ಒದೆ ತಿಂದ ಅಂತ ಗೊತ್ತಿಲ್ಲ , ಈತ ಯಾಕಾಗಿ ಹೊಡ್ದೆ ಅಂತ ಅವನಿಗೇ ಗೊತ್ತಿಲ್ಲ ಎಣ್ಣೆ ಏಟಲ್ಲಿ ಹಲ್ಲೆ ನಡೆಸಿ ನಶೆ ಇಳಿದ ಮೇಲೆ ಗಲಾಟೆ ವಿಚಾರವೇ ಗೊತ್ತಿಲ್ಲ ಅಂತ ಇಲ್ಲೊಬ್ಬ ಕಥೆ ಕಟ್ಟಿದ್ದಾನೆ.
ಗೆಳೆಯನಿಂದ ಗೆಳೆಯನಿಗೆ ಮಾರಾಣಂತಿಕ ಹಲ್ಲೆಯಾಗಿದ್ದು,ಪಾರ್ಟಿ ಮಾಡಿದ ಬಳಿಕ ಜೊತೆಗೆ ಇದ್ದವನಿಗೆ ಹಲ್ಲೆ ನಡೆಸಿರೋ ಘಟನೆ ನಗರದ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಶಕ್ತಿವೇಲು ಮತ್ತು ಗಾಯಾಳು ಅಳಗರ ಸ್ವಾಮಿ ಗಲಾಟೆಗೂ ಮುನ್ನ ಒಟ್ಟಿಗೆ ಪಾರ್ಟಿ ಮಾಡಿದ್ರು.
ಸೋಮೇಶ್ವರ ಬಡವಾಣೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಐದಾರು ಜನ ಯುವಕರು ಪಾರ್ಟಿ ಮಾಡಿದ್ರು. ಬಳಿಕ ಶಕ್ತಿವೇಲು ಹಾಗು ಸ್ವಾಮಿ ಗಲಾಟೆ ಶುರುಮಾಡಿದ್ದಾರೆ.
ಗಲಾಟೆ ಶುರುವಾಗ್ತಿದ್ದಂತೆ ಜೊತೆಯಲ್ಲಿದ್ದವರು ಎಸ್ಕೇಪ್ ಆಗಿದ್ರು. ಈ ವೇಳೆ ಸ್ವಾಮಿಗೆ ಕಲ್ಲಿನಿಂದ ಚಚ್ಚಿ ಗೋಡೆಗೆ ಬಡೆಸಿದ್ದಾನೆ. ಘಟನೆ ಸಂಬಂಧ ಹುಳಿ ಮಾವು ಪೊಲೀಸ್ರು ಅರೋಪಿ ಶಕ್ತಿವೇಲೂ ಎಂಬಾತನನ್ನು ಅರೆಸ್ಟ್ ಮಾಡಿದ್ದು,ವಿಚಾರಣೆ ವೇಳೆ ಶಕ್ತಿವೇಲೂ ಸಾರ್ ನಾನು ಹೊಡೆದ್ನಾ ಸಾರ್ ಎಂದು ಪ್ರಶ್ನೆ ಮಾಡಿದ್ದಾನೆ.ರಾತ್ರಿ ಪಾರ್ಟಿ ಮಾಡಿದ್ವಿ ಸಾರ್ ಆಮೇಲೆ ಟೈಟ್ ಆಗಿದ್ವಿ. ಜಗಳ ಆಗಿರಬೇಕು ಅದ್ರೆ ಯಾಕೆ ಜಗಳ ಆಗಿದೆ ಅನ್ನೊದೆ ಗೊತ್ತಿಲ್ಲಾ ಅಂತ ಕಥೆ ಕಟ್ಟಿದ್ದಾನೆ.
ಇತ್ತ ಹಲ್ಲೆಗೆ ಒಳಗಾಗದ ವ್ಯಕ್ತಿಗೂ ಯಾಕೆ ಗಲಾಟೆ ಅನ್ನೊದೇ ಗೊತ್ತಿಲ್ಲಾ ಸದ್ಯ ಪೊಲೀಸ್ರು ಅವ್ರ ತನಿಖೆ ಮುಂದುವರಿಸಿದ್ದಾರೆ.
PublicNext
06/09/2022 05:26 pm