ಬೆಂಗಳೂರು: ಪರಿಚಯಸ್ಥರು, ನಂಬಿಕಸ್ಥರು ಅಂತ ಮಹಿಳೆಯರು ಮೋಸ ಹೋಗ್ತಿದ್ದಾರೆ. ಆತಂಕಕಾರಿ ವಿಚಾರ ಅಂದ್ರೆ ರಾಜ್ಯದಲ್ಲಿ
ಪರಿಚಿತರಿಂದಲೇ ಮಹಿಳೆಯರ ಮೇಲೆ ಆತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಅನ್ನೋ ಆತಂಕಕಾರಿ ಸಂಗತಿ ಬಯಲಾಗಿದೆ. ಈ ವರ್ಷ ದಾಖಲಾದ ಆತ್ಯಾಚಾರ ಪ್ರಕರಣಗಳಲ್ಲಿ ಶೇ.80ಕ್ಕಿಂತ ಪ್ರಕರಣಹೆಚ್ಚು ಪ್ರಕರಣ ಪರಿಚಯಸ್ಥರೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ಅಘಾತಕಾರಿ ಮಾಹಿತಿ ಬೆಚ್ಚಿಬೀಳಿಸುವಂತಿದೆ.
ಕಳೆದ ಜನವರಿಯಿಂದ ಜುಲೈವರೆಗೂ ರಾಜ್ಯದಲ್ಲಿ ಒಟ್ಟು 325 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಈ ಪೈಕಿ 256 ಮಹಿಳೆಯರಿಗೆ ಪರಿಚಯಸ್ಥರಿಂದಲೇ ಮಾನಹಾನಿಯಾಗಿದೆ. ಇನ್ನೂ 190 ಪ್ರಕರಣಗಳಲ್ಲಿ ಪರಿಚಯಸ್ಥರೇ ಅತ್ಯಾಚಾರ ಆರೋಪಿಗಳಾಗಿದ್ರೆ 30 ಪ್ರಕರಣಗಳಲ್ಲಿ ಸಂಬಂಧಿಕರೇ ಕೃತ್ಯವೆಸಗಿದ್ದು, 32 ಪ್ರಕರಣಗಳಲ್ಲಿ ನೆರೆಹೊರೆಯವರು ಮತ್ತು 4 ವಿಚ್ಚೇದನ ಹಂತದಲ್ಲಿರುವ ಪತಿಯರೇ ರೇಪ್ ಮಾಡಿರುವುದಾಗಿ ಎಂದು ಪೊಲೀಸ್ ಅಂಕಿ-ಅಂಶಗಳು ತಿಳಿಸಿವೆ.
ಇನ್ನೂ 2021ರಲ್ಲಿ ರಾಜ್ಯದಲ್ಲಿ 556 ಆತ್ಯಾಚಾರ ಪ್ರಕರಣ ದಾಖಲಾಗಿದ್ದರೆ 2020ರಲ್ಲಿ 479 ಕೇಸ್ ಗಳು ವರದಿಯಾಗಿತ್ತು. ಬಹುತೇಕ ಆತ್ಯಾಚಾರ ಪ್ರಕರಣಗಳಲ್ಲಿ ಆರೋಪಿತರು ಸಂತ್ರಸ್ತೆಗೆ ಪರಿಚಯದವರಾಗಿರುತ್ತಾರೆ. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಅನಂತರ ವಿವಾಹ ಮಾಡಿಕೊಳ್ಳದೆ ನುಣುಚಿಕೊಳ್ಳುವವರ ಆರೋಪಿತರ ವಿರುದ್ಧ ಸಂತ್ರಸ್ತೆಯರು ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಸಂಗಗಳೇ ಅಧಿಕವಾಗಿವೆ. ಇನ್ನೂ ಈ ರೀತಿ ಮಾನಹಾನಿಗೆ ಒಳಗಾಗುವವರಲ್ಲಿ ಯುವತಿಯರೇ ಹೆಚ್ಚಿದ್ದಾರೆ.
PublicNext
29/08/2022 10:41 pm