ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದೇಶದಿಂದ ಚಿನ್ನ ಕಳ್ಳಸಾಗಣೆ : ಚಿನ್ನದೊಂದಿಗೆ ವ್ಯಕ್ತಿ ಅರೆಸ್ಟ್

ದೇವನಹಳ್ಳಿ : ದೇವನಹಳ್ಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 13 ಲಕ್ಷ 11 ಸಾವಿರ ಮೌಲ್ಯದ 249ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ. ಕುವೈತ್ ನಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.

ಪ್ಲಾಸ್ಟಿಕ್ ಟೇಪ್ ಒಳ ಭಾಗದಲ್ಲಿ ಚಿನ್ನವಿಟ್ಟು, ಅದರ ಮೇಲೆ ಟೇಪ್ ಹಾಕಿ, ಪ್ರಯಾಣಿಕನ ಸೋಗಿನಲ್ಲಿ ಚಿನ್ನ ಸಾಗಣಿಕೆ ಮಾಡ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಿನ್ನ ಕಳ್ಳಸಾಗಣೆ ಬೆಳಕಿಗೆ ಬಂದಿದೆ.

Edited By : Nirmala Aralikatti
Kshetra Samachara

Kshetra Samachara

26/08/2022 08:16 pm

Cinque Terre

2.04 K

Cinque Terre

0

ಸಂಬಂಧಿತ ಸುದ್ದಿ