ಬೆಂಗಳೂರು: ಮಹಿಳಾ ಹೆಡ್ ಕಾನ್ಸ್‌ಟೇಬಲ್‌ಗೆ ರೌಡಿಯೋರ್ವ ಡ್ರ್ಯಾಗರ್‌ನಿಂದ ಇರಿದಿರುವ ಘಟನೆ ಹೆಚ್‌ಎಎಲ್ ಠಾಣೆ ವ್ಯಾಪ್ತಿಯ ಜ್ಯೋತಿನಗರಲ್ಲಿ ನಡೆದಿದೆ.
ಆರೋಪಿಯೋರ್ವನ್ನು ಠಾಣೆಗೆ ಕರೆತರಲು ಹೋಗಿದ್ದಾಗ ಘಟನೆ ನಡೆದಿದ್ದು, ವಿನೂತಾ ಇರಿತಕ್ಕೆ ಒಳಗಾದ ಮಹಿಳಾ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಆಗಿದ್ದಾರೆ. ರೌಡಿ ಶೀಟರ್ ಶೇಕ್ ಶರೀಫ್ ಅಲಿಯಾಸ್ ಶರೀಫ್‌ನಿಂದ ಆಗಸ್ಟ್ 6ದು ಘಟನೆ ನಡೆದಿದ್ದು, ಚಿಕಿತ್ಸೆ ಪಡೆದು ಮೂರು ದಿನಗಳ ಬಳಿಕ ಮಹಿಳಾ ಹೆಡ್ ಕಾನ್ಸ್‌ಟೇಬಲ್ ದೂರು ದಾಖಲಿಸಿದ್ದಾರೆ.
ಆರೋಪಿ ಮೇಲೆ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳಿದ್ದು, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದ. ಆದ್ರೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆಸಾಮಿ ಮತ್ತೊಂದು ಕೊಲೆ ಮಾಡಲು ಸಂಚು ರೂಪಿಸಿರೋದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು.
ಈ ಹಿನ್ನಲೆಯಲ್ಲಿ ಆತನನ್ನು ಠಾಣೆಗೆ ಕರೆತರಲು ಹೋಗಿದ್ದ ವಿನೂತಾ ಮತ್ತು ತಂಡ ಶೇಕ್ ಬೆನ್ನು ಹತ್ತಿದ್ದರು. ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ತೆರಳುತ್ತಿರುವ ವೇಳೆ ರಾತ್ರಿ 9:30ಕ್ಕೆ ಆತನನ್ನು ಹಿಡಿದು ಕರೆದುಕೊಂಡು ಮುಂದಾದಾಗ ವಿನುತಾ ಅವರಿಗೆ ಡ್ರ್ಯಾಗರ್‌ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಸ್ಥಳೀಯರ ಸಹಾಯದಿಂದ ಆತನ್ನನ್ನು ಹಿಡಿದು ಠಾಣೆಗೆ ಕರೆತಂದ ಪೊಲೀಸರು, ಗಾಯಾಳು ವಿನೂತಾಗೆ ಜೀವಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಿದ್ರು. ಘಟನೆ ಸಂಬಂದ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
17/08/2022 10:53 am