ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನಧಿಕೃತವಾಗಿ ತಲೆಯೆತ್ತಿದ ಜಾಹೀರಾತು ಫಲಕಗಳು; ರಸ್ತೆಯಲ್ಲಿ ಓಡಾಡಲು ಪ್ರಾಣಸಂಕಟ

ಆನೇಕಲ್: ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಬೃಹತ್‌ ಗಾತ್ರದ ಜಾಹೀರಾತು ಫಲಕಗಳು ಅಕ್ರಮವಾಗಿ ತಲೆ ಎತ್ತಿವೆ. ಹೀಗಾಗಿ ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿ ಮೂಲಕ ನೋಟೀಸ್ ಜಾರಿ ಮಾಡಲಾಗಿದೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಬಾಬು ತಿಳಿಸಿದ್ದಾರೆ.

ಬೊಮ್ಮಸಂದ್ರ ಹಾಗೂ ಸರ್ಜಾಪುರ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಬದಿಗೆ, ರಸ್ತೆ ಮಧ್ಯಭಾಗದಲ್ಲಿ ಅನಧಿಕೃತವಾಗಿ ನಾಮ ಫಲಕ, ಫ್ಲೆಕ್ಸ್‌, ಬ್ಯಾನರ್‌ಗಳು ಬೋರ್ಡಿಂಗ್ ಅಳವಡಿಸಲಾಗಿದೆ. ಇವು ಪ್ರಾಣಕ್ಕೆ ಕುತ್ತು ತರುವಂತಾಗಿವೆ. ಹೀಗಾಗಿ ಅವುಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Nagesh Gaonkar
PublicNext

PublicNext

28/07/2022 10:11 pm

Cinque Terre

49.54 K

Cinque Terre

1

ಸಂಬಂಧಿತ ಸುದ್ದಿ