ಬೆಂಗಳೂರು: ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಸಿದ್ದ ಇಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಉಷಾ ಮತ್ತು ಸುರೇಶ್ ಬಾಬು ಬಂಧಿತ ಆರೋಪಿಗಳು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಮತ್ತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಲಹಂಕ ಬಳಿಯ ಖಾಸಗಿ ಹೋಟೆಲ್‌ಗೆ ಹೋಗಿದ್ದ ಇಬ್ಬರು ಪ್ರೇಮಿಗಳು, ಒಂದೇ ರೂಮ್‌ನಲ್ಲಿ ಎರಡು ಬಾರಿ ಭೇಟಿ ಆಗಿದ್ದರು. ಈ ವೇಳೆ ಯಾರಿಗೂ ಗೊತ್ತಾಗದ ರೀತಿ ಆರೋಪಿಗಳು ಕ್ಯಾಮೆರಾ ಇಟ್ಟು ವಿಡಿಯೋ ಚಿತ್ರಿಕರಿಸಿದ್ದರು. ಆರೋಪಿಗಳಾದ ಉಷಾ ಮತ್ತು ಸುರೇಶ್ ಸಹ ಪ್ರೇಮಿಗಳು. ಅಲ್ಲದೇ ನೊಂದ ಮಹಿಳೆಯ ಹತ್ತಿರದ ಸಂಬಂಧಿ ಸಹ ಆಗಿದ್ದಾರೆ.
ಆರೋಪಿಗಳು ಯಾರಿಗೂ ಇಳಿಯದಂತೆ ರೂಮ್‌ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಕೆಲ ದಿನಗಳ ನಂತರ ನೊಂದ ಮಹಿಳೆಗೆ ವಾಟ್ಸಪ್ ಮೂಲಕ ವಿಡಿಯೋ ಕಳಿಸಿದ್ದಾರೆ. ವಿಡಿಯೋ ನೋಡಿ ಮಹಿಳೆ ಶಾಕ್ ಆಗಿದ್ದಾರೆ. ಬಳಿಕ ಅದೇ ನಂಬರ್‌ನಿಂದ ಇಪತ್ತೈದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಹಣ ಕೊಡಿ ಇಲ್ಲಾವಾದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಮಹಿಳೆ ಹಣ ನೀಡಲು ತಡಮಾಡಿದಾಗ ಆರೋಪಿ ಉಷಾ ಹೊಸ ನಾಟಕ ಶುರು ಮಾಡಿದ್ದಾರೆ. ತನ್ನ ಮೊಬೈಲ್‌ಗೂ ಯಾರೋ ನಿಮ್ಮ ವಿಡಿಯೋ ಕಳಿಸಿದ್ದಾರೆ ಎಂದು ಮತ್ತಷ್ಟು ಬೆದರಿಸಲು ಮುಂದಾಗಿದ್ದಾರೆ. ಜೊತೆಗೆ ಸಿಡಿ ಮಾಡಿ ಮನೆಯವರು ಹಾಗೂ ಕುಟುಂಬದ ಎಲ್ಲರಿಗೂ ಕಳಿಸುವುದಾಗಿ ಹೆದರಿಸಿದ್ದಾರೆ.
ಇದರಿಂದ ನೊಂದ ಮಹಿಳೆ ಈ ಬಗ್ಗೆ ಪೊಲೀಸ್ ಮೊರೆ ಹೋಗಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್..ಯಲಹಂಕ
Kshetra Samachara
19/07/2022 01:42 pm