ಬೆಂಗಳೂರ: ಗುರಾಯಿಸಿದ ವಿಚಾರಕ್ಕೆ ಇಬ್ಬರು ರೌಡಿ ಗುಂಪುಗಳ ನಡುವೆ ಮಾರಾಮಾರಿಯಾಗಿರುವ ಘಟನೆ ಗಾಂಧಿನಗರದ ಸೆವೆನ್ ಹಿಲ್ಸ್ ಲೇಡಿಸ್ ಬಾರ್ ಮುಂದೆ ನಡೆದಿದೆ.
ಫಿಲ್ಮಿ ಸ್ಟೈಲ್ ನಲ್ಲಿ ಗಲಾಟೆ ನಡೆದಿದ್ದು ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರ ರೌಡಿಶೀಟರ್ ರಾಘವೇಂದ್ರ @ ಕೆಂದ ಹಾಗೂ ಶ್ರೀರಾಮ್ ಪುರ ರೌಡಿಶೀಟರ್ ಯಶ್ವಂತ್ ನಡುವೆ ಗ್ಯಾಂಗ್ ವಾರ್ ನಡೆದಿದ್ದು. ಎಣ್ಣೆ ಏಟಲ್ಲಿ ಗುರಾಯಿಸಿದ ಕಾರಣಕ್ಕೆ ಗ್ಯಾಂಗ್ ವಾರ್ ನಡೆದಿದೆ. ರಾಘವೇಂದ್ರ ಮತ್ತು ಸ್ನೇಹಿತ ಆಕಾಶ್ , ನವೀನ್ ರಾತ್ರಿ 12.30 ಕ್ಕೆ ಸೆವೆನ್ ಹಿಲ್ಸ್ ಬಾರ್ ಗೆ ಪಾರ್ಟಿಗೆ ಬಂದಿದ್ರು.
ಈ ವೇಳೆ ಬಾತ್ ರೂಮ್ ಗೆ ಹೋದಾಗ ಅಲ್ಲಿದ್ದ ಯಶ್ವಂತ್ ರಾಘವೇಂದ್ರನನ್ನು ಗುರಾಯಿಸಿದ್ದ. ಏಯ್ ಯಾಕೋ ಗುರಾಯಿಸೊದು ಎಂದು ಕೇಳಿದಕ್ಕೆ ಯಶ್ವಂತ ಹಾಗು ಸ್ನೇಹಿತರು ಮದ್ಯದ ಬಾಟಲ್ ನಿಂದ ಹಲ್ಲೆ ನಡೆಸಿದ್ದಾರೆ.
ನಂತರ ಅಲ್ಲಿಂದ ಬಾರ್ ಕೆಳಗೆ ಬಂದಾಗ ರಾಘವೇಂದ್ರನ ಕಡೆಯವರು ಯಶ್ವಂತ್ ಗೆ ಬಾಟಲ್ ನಿಂದ ತಲೆಗೆ ಹೊಡೆದಿದ್ದಾರೆ.ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎರೆಡು ಪ್ರಕರಣ ದಾಖಲಾಗಿದೆ.
PublicNext
17/07/2022 12:18 pm