ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟಿಯ ಸ್ನೇಹಿತ ಹಾಗೂ ಡ್ರಗ್ಸ್ ಕೇಸ್ ಆರೋಪಿಯನ್ನು ಪೊಲೀಸರು ವಂಚನೆ ಕೇಸ್ ನಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಯಶವಂತಪುರ ಆರ್ ಟಿ ಓ ನ ಎಸ್ ಡಿ ಎ ರವಿಶಂಕರ್ ಬಂಧಿತ ಆರೋಪಿಯಾಗಿದ್ದು,ರವಿಶಂಕರ್ ಸ್ಯಾಂಡಲ್ ವುಡ್ ನಟಿಯೊಬ್ಬಳ ಸ್ನೇಹಿತನಾಗಿದ್ದು, ಈ ಹಿಂದೆ ಡ್ರಗ್ಸ್ ಕೇಸಲ್ಲಿ ಈ ಹಿಂದೆ ಜೈಲು ಕಂಬಿ ಎಣಿಸಿದ್ದ. ಈಗ ಮತ್ತೆ ಕಾರಿಗೆ ಲೈಫ್ ಟೈಮ್ ಟ್ಯಾಕ್ಸ್ ಕಟ್ಟುತ್ತೇನೆ ಅಂತಾ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದಾನೆ. ಈ ಹಿನ್ನೆಲೆ ಯೋಗೇಶ್ ಎಂಬುವವರು ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದರು.
ಹೀಗಾಗಿ ಪೊಲೀಸರು ರವಿಶಂಕರ್ ಹಾಗೂ ಅಜಯ್ ನನ್ನು ಬಂಧಿಸಿದ್ದಾರೆ.ಅಜಯ್ ಎಂಬ ಕಾರು ಡೀಲರ್ ನಿಂದ ಆಶಾ ಎಂಬವವರು ಕಾರು ಖರೀದಿಸಿದ್ದರು. ಲೈಫ್ ಟೈಮ್ ತೆರಿಗೆ ಕಟ್ಟಲು ಅಜಯ್ ಗೆ ಆಶಾ ಯೋಗೇಶ್ ದಂಪತಿ ಹಣ ಕೊಟ್ಟಿದ್ರು. ಆದರೆ ಹಣ ಪಡೆದುಕೊಂಡ ಆರೋಪಿಗಳು ಆರ್ ಟಿ ಓಗೆ ಟ್ಯಾಕ್ಸ್ ಕಟ್ಟದೇ ವಂಚಿಸಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
Kshetra Samachara
17/07/2022 12:01 pm