ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗ್ತಿದೆ. ಕಾಸ್ಟ್ಲಿ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿರೋ ಈ ಕಳ್ಳರು ಸಿನಿಮೀಯ ಶೈಲಿಯಲ್ಲಿ ಬೈಕ್ ಲಾಕ್ ಬ್ರೇಕ್ ಮಾಡಿ ಕದ್ದು ಎಸ್ಕೇಪ್ ಆಗ್ತಾರೆ.
ಎಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಲಾಕ್ ಮುರಿದು ಇಬ್ಬರು ಕಳ್ಳರು ಬೈಕ್ ಸಮೇತ ಪರಾರಿಯಾಗಿದ್ದಾರೆ.
ಕಳ್ಳರು ಬೈಕ್ ಕದ್ದು ಎಸ್ಕೇಪ್ ಆಗಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಚ್ಎಎಲ್ ಪೊಲೀಸ್ ಠಾಣೆಗೆ ಬೈಕ್ ಮಾಲೀಕ ದೂರು ನೀಡಿದ್ದಾನೆ.
Kshetra Samachara
15/07/2022 01:06 pm