ಬೆಂಗಳೂರು: ಜಮೀನು ವಿಚಾರ ಇತ್ಯರ್ಥಕ್ಕೆ ಮಾಜಿ ಕಾರ್ಪೊರೇಟರ್ ಸಹೋದರನಿಂದ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್‌ಪೋರ್ಸ್ (BMTF) ಸಬ್ ಇನ್ಸ್‌ಪೆಕ್ಟರ್ ಬೇಬಿ ಓಲೇಕಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ದೂರುದಾರ ಗಿರೀಶ್ ಎಂಬುವರನ್ನು ಜಮೀನು ಸೆಟಲ್ ಮೆಂಟ್‌ಗೆ ಕರೆಸಿ ಮೂರು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಬೇಬಿ ಓಲೇಕಾರ್ 1 ಲಕ್ಷ ಲಂಚ ಪಡೆಯುವಾಗ ಲಾಕ್ ಆಗಿದ್ದಾರೆ. ಸದ್ಯ ಮಹಿಳಾ ಪಿಎಸ್ಐನ ಎಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದೂರುದಾರ ಸಹೋದರ ಲಕ್ಷ್ಮೀನಾರಾಯಣ್ ಮಾತನಾಡಿ ಹೊರಮಾವಿನಲ್ಲಿರುವ ಜಮೀನು ಸಂಬಂಧ ಎರಡು ವರ್ಷಗಳ ಕೇಸ್ ನಡೆಯುತಿತ್ತು. ಅದೇ ವರ್ಷದಲ್ಲೇ ಕೇಸ್ ಕ್ಲೋಸ್ ಆಗಿತ್ತು. ಎರಡು ತಿಂಗಳ ಹಿಂದೆ ಪಿಎಸ್ಐ ಬೇಬಿ ಓಲೇಕಾರ್ ಕರೆ ಮಾಡಿ ನಿಮ್ಮ ಕೇಸ್ ವಿಚಾರಣೆ ಬಾಕಿಯಿದ್ದು ಕಚೇರಿಗೆ ಬನ್ನಿ ಮಾತನಾಡಿಬೇಕೆಂದು ಹೇಳಿದ್ದರು. ಎರಡು ವರ್ಷದ ಹಿಂದೆಯೇ ಪ್ರಕರಣ ತನಿಖೆ ಮುಕ್ತಾಯವಾಗಿದೆ ಎಂದು ತಿಳಿಸಿದ್ದೆವು. ಪ್ರಕರಣ ತನಿಖೆ ನಡೆಸಬೇಕಿದ್ದು ಇದಕ್ಕೆ ಮೂರು ಲಕ್ಷ ಆಗುತ್ತೆ ಎಂದು ಹೇಳಿದ್ದರು. ಕೊನೆಗೆ ಒಂದು ಲಕ್ಷ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದರು. ಎಸಿಬಿಗೆ ದೂರು ನೀಡಿದ್ದೇವು. ಇಂದು ಒಂದು ಲಕ್ಷ ಹಣವನ್ನ ಪಿಎಸ್ಐಗೆ ನೀಡಿದ್ದೇವು. ಈ ವೇಳೆ ಎಸಿಬಿ ಅಧಿಕಾರಿಗಳು ಬಂದಾಗ ಬೇಬಿ ಓಲೇಕಾರ್ ದುಡ್ಡು ಕೊಟ್ಟಿಲ್ಲ ಅವರು ಎಂದು ನಾಟಕ ಆಡಿದ್ದಾರೆ
ಅಧಿಕಾರಿಗಳು ಹುಡುಕಾಡಿ ದುಡ್ಡು ತೆಗೆದಾಗ ತಲೆ ಸುತ್ತಿರೋತರ ನಾಟಕ ಆಡಿದ್ದಾರೆ ಎಂದು ಮಾಹಿತಿ ನೀಡಿದರು.
PublicNext
07/07/2022 06:29 pm