ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೂರುವರೆ ವರ್ಷದ ಮಗುವನ್ನ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರು:ಮಗುವನ್ನ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ರಾಜರಾಜೇಶ್ವರಿ ನಗರದ ಚನ್ನಸಂಧ್ರದಲ್ಲಿ ನಡೆದಿದೆ.

ಆರ್ ಆರ್ ನಗರದಲ್ಲಿರುವ ಮಂತ್ರಿ ಅಲ್ಫಿಯನ್ ಅಪಾರ್ಟ್ಮೆಂಟ್‌ನಲ್ಲಿ ದೀಪಾ ದಂಪತಿ‌ ವಾಸವಾಗಿರುತ್ತಾರೆ. ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲ್ತಿದ್ದ ದೀಪ 31 ಎಂಬಾಕೆ ಡೆತ್ ನೋಟ್ ಬರೆದಿಟ್ಟು ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವೇಲ್‌ನಿಂದ ಮೂರುವರೆ ವರ್ಷದ ರಿಯಾ ಎಂಬ ಮಗುವನ್ನ ಹತ್ಯೆಮಾಡಿ ತಾನು ನೇಣಿಗೆ ಶರಣಾಗಿದ್ದಾಳೆ.

ಮೂಲತಃ ಬ್ರಹ್ಮಾವರ ಮೂಲದ ದೀಪಾ ಹಾಗೂ ಗಂಡ ಆದರ್ಶ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು 2017 ರಲ್ಲಿ ದೀಪಾಳನ್ನ ಮದುವೆಯಾಗಿದ್ದಾರೆ. ಮದ್ವೆಯಾದಗಿನಿಂದಲೂ ಆರ್.ಆರ್. ನಗರದ ಮಂತ್ರಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುತ್ತಾರೆ.

ವಾರದಿಂದ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲ್ತಿದ್ದ ದೀಪಾ, ಚಿಕಿತ್ಸೆ ಪಡೆದ್ರು ಅನಾರೋಗ್ಯ ಕಮ್ಮಿಯಾಗಿರಲಿಲ್ಲ. ಹೀಗಾಗಿ ದೀಪಾ ಜಿಗುಪ್ಸೆಗೊಳಗಾದ್ಲಂತೆ. ರಾತ್ರಿ ಮಲಗಿದ್ದ ವೇಳೆ ಮಗುವಿನ ಕುತ್ತಿಗೆಗೆ ವೇಲ್ ಬಿಗಿದು ನೇಣು ಹಾಕಿದ್ದಾಳೆ. ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಗಾಗಲೇ ಸ್ಥಳಕ್ಕೆ ಆರ್. ಆರ್. ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Edited By :
PublicNext

PublicNext

01/07/2022 01:26 pm

Cinque Terre

15.39 K

Cinque Terre

0

ಸಂಬಂಧಿತ ಸುದ್ದಿ