ದೊಡ್ಡಬಳ್ಳಾಪುರ: ಬೋರ್‌ವೇಲ್‌ನ ಕೇಬಲ್ ಅನ್ನು ಕಳ್ಳತನ ಮಾಡಲಾಗಿದ್ದು, ಬೋರ್‌ವೆಲ್ ರಿಪೇರಿಯಾಗದೆ ಮೂರು ಗ್ರಾಮಗಳ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ವಾಟರ್ ಮ್ಯಾನ್‌ನ ನಿರ್ಲಕ್ಷ್ಯದಿಂದ ಕಳ್ಳತನಕ್ಕೆ ಕಾರಣವೆಂದು ಗ್ರಾಮಸ್ಥರ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇನ್ ಶೆಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಬೋರ್‌ವೇಲ್‌ನ ಪಂಬ್ ಸುಟ್ಟು ಹೋಗಿದ್ದು, ರಿಪೇರಿಗಾಗಿ ಪಂಬ್ ಬಿಚ್ಚಲಾಗಿತ್ತು. ಕೇಬಲ್ ಮತ್ತು ಪೈಪ್‌ಗಳನ್ನ ಬೋರ್‌ವೆಲ್‌ನಲ್ಲಿಯೇ ಬಿಡಲಾಗಿತ್ತು. ಇದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನ ವಾಟರ್ ಮ್ಯಾನ್ ತಿಪ್ಪಯ್ಯನಿಗೆ ವಹಿಸಲಾಗಿತ್ತು. ಆದರೆ ವಾಟರ್ ಮ್ಯಾನ್ ಬೋರ್‌ವೆಲ್ ನೋಡಿಕೊಳ್ಳುವ ಬದಲಿಗೆ ಮನೆಗೆ ಬಂದಿದ್ದ, ಇದೇ ಸಮಯವನ್ನು ಕಾದಿದ್ದ ಕಳ್ಳರು ಸುಮಾರು 1 ಲಕ್ಷ ರೂ. ಮೌಲ್ಯದ ಸಾವಿರ ಆಡಿಯ ಕೇಬಲ್ ಕದ್ದು ಪರಾರಿಯಾಗಿದ್ದಾರೆ.
ಬೋರ್ ವೇಲ್ ರಿಪೇರಿಯಾಗದೆ, ಕಳೆದ ಐದು ದಿನಗಳಿಂದ ಬಂಡಿಗಾನಹಳ್ಳಿ, ಬೆಣಚಿಹಟ್ಟಿ, ಬಂಡೆಗ್ರಾಮದ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿಲ್ಲದ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ಒದಗಿಸಲು ಸಹ ಪಿಡಿಓ ತ್ರಿವೇಣಿ ಮತ್ತು ಕಾರ್ಯದರ್ಶಿ ತಿಪ್ಪಣ್ಣ ನಿರ್ಲಕ್ಷ್ಯತೆ ತೋರಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಗ್ರಾಮ ಪಂಚಾಯತ್ ಸದಸ್ಯ ಗಂಗಹನುಮಯ್ಯ ನೇತೃತ್ವದಲ್ಲಿ ಪಂಚಾಯತ್‌ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದದ್ದಾರೆ.
Kshetra Samachara
28/06/2022 08:13 am