ಬೆಂಗಳೂರು: ಸಿಲಿಕಾನ್ ಸಿಟಿ ಬರುಬರುತ್ತಾ ರಾಬರಿ ಸಿಟಿ ಆಗ್ತಿದ್ಯಾ ಅನ್ನೋ ಭಯ ಶುರುವಾಗಿದೆ. ಒಂದು ಕಡೆ ಚೈನ್ ಸ್ನಾಚ್, ಇನ್ನೊಂದು ಕಡೆ ಮೊಬೈಲ್ ರಾಬರಿ. ರಾತ್ರಿ ಹೊತ್ತು ವಾಕಿಂಗ್ ಮಾಡ್ತಾ ಮೊಬೈಲ್ ನಲ್ಲಿ ಮಾತನಾಡ್ತಿದ್ದ ಯುವತಿಯ ಮೊಬೈಲ್ ನ್ನು ಖದೀಮರು ಕಸಿದು ಪರಾರಿಯಾಗಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇಳಿಸಂಜೆ 7ರ ಸುಮಾರಿಗೆ ಯುವತಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಡಿಯೋ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಮೊಬೈಲ್ ಕಿತ್ತು ಪರಾರಿಯಾಗಿದ್ದಾರೆ. ಮೊಬೈಲ್ ರಾಬರಿಯ ಸಿಸಿ ಟಿವಿ ವೀಡಿಯೊ ವೈರಲ್ ಆಗಿದ್ದು, ಘಟನೆ ಎಲ್ಲಿ ಆಗಿದೆ ಅನ್ನೋದರ ಮಾಹಿತಿ ಸಿಕ್ಕಿಲ್ಲ.
PublicNext
24/06/2022 09:55 pm