ಬೆಂಗಳೂರು: ಒಂದು ಆರ್‌ಟಿಓನಿಂದ ಒಂದು ಸೀರಿಯಲ್‌ನಲ್ಲಿ ಒಂದೇ ನಂಬರ್ ಕೊಡುವುದು ಕಡ್ಡಾಯ. ಆದರೆ ಬೆಂಗಳೂರಿನಲ್ಲಿ ಒಂದೇ ಆರ್‌ಟಿಓನ ಒಂದೇ ಸೀರಿಯಲ್ ನಂಬರ್‌ನ ಒಂದಲ್ಲ ಎರಡಲ್ಲ ಮೂರು ವಾಹನಗಳು ಕಂಡು ಬಂದಿವೆ.
ಹೋಂಡಾ ಡಿಯೋ, ಸುಝುಕಿ ಗ್ಲಿಸ್ಚರ್ ಸೇರಿ ಮೂರು ವಾಹನಗಳ ನಂಬರ್ ಒಂದೇ ಇದೆ. ಈ ಹಿಂದೆ ಒಂದೇ ಸಂಖ್ಯೆಯ ಎರಡು ವಾಹನಗಳು ಪತ್ತೆಯಾಗುತ್ತಿತ್ತು. ಆದರೆ ಈಗ ಒಂದೇ ನಂಬರಿನಲ್ಲಿರುವ ವಾಹನಗಳ ಸಂಖ್ಯೆ ಮೂರಕ್ಕೇರಿದ್ದು ಪೊಲೀಸರಿಗೆ ಇದು ತಲೆನೋವಾಗಿದೆ. ನಗರದಲ್ಲಿ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ ಹೆಚ್ಚುತ್ತಿದಿಯಾ ಅನ್ನೋ ಅನುಮಾನ ಶುರುವಾಗಿದೆ.
ಈ ನಕಲಿ ನಂಬರ್ ಪ್ಲೇಟ್‌ನಿಂದ ಯಾರೋ ತಪ್ಪು ಮಾಡಿದರೆ ಇನ್ಯಾರಿಗೋ ಫೈನ್ ಬೀಳುತ್ತಿದೆ. ಆರ್‌ಟಿಒ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಬೇಕಾಗಿದೆ. ಈ ರೀತಿಯ ವಾಹನಗಳಿಂದ ಸರಗಳ್ಳತನ, ಕಳವು, ಕೊಲೆ ಪ್ರಕರಣಕ್ಕೆ ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ನಕಲಿ ನಂಬರ್ ಪ್ಲೇಟ್ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆಯಿದೆ.
Kshetra Samachara
24/06/2022 06:35 pm