ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಬೈಲ್ ಗಾಗಿ ಮೆಟ್ರೋ ಕೆಲಸಗಾರನ ಕೊಲೆ; ಆರೋಪಿಗಳು ಅಂದರ್

ಬೆಂಗಳೂರು: ಪುಲಿಕೇಶಿನಗರದಲ್ಲಿ ಕಳೆದ 14 ರಾತ್ರಿ ನಡೆದಿದ್ದ ಬಿಕಾಸ್ ಮುಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನ ಪುಲಿಕೇಶಿನಗರ ಪೊಲೀಸ್ರು ಬಂಧಿಸಿದ್ದಾರೆ. ಪುಲಿಕೇಶಿನಗರದ ಎಂಎಂ ರಸ್ತೆಯಲ್ಲಿ ಬಿಕಾಸ್, ಮೆಟ್ರೋ ಕೆಲಸ ಮುಗಿಸಿ ಬರುವಾಗ ರಾತ್ರಿ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ರು.

ಪ್ರಕರಣ ಸಂಬಂಧ ಎರಡು ತಂಡವನ್ನ ರಚಿಸಿದ್ದ ಪೊಲೀಸ್ರು, ಮಜ್ಹರ್ ಹಾಗೂ ಕಾರ್ತಿಕ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಎಲ್ & ಟಿ ಕಂಪೆನಿ ನಿರ್ಮಾಣ ಮಾಡ್ತಿದ್ದ ಮೆಟ್ರೋದಲ್ಲಿ ಕೆಲಸ ಮಾಡ್ತಿದ್ದ ಬಿಕಾಸ್ ಜೂನ್ 14 ರ ರಾತ್ರಿ ಕೆಲಸ ಮುಗಿಸಿ ಬರ್ತಿದ್ದ ವೇಳೆ

ಅಡ್ಡಗಟ್ಟಿ ಆರೋಪಿಗಳು ಕೊಲೆ ಮಾಡಿದ್ರು.

ಮೊಬೈಲ್ ರಾಬರಿಗೆ ಮುಂದಾಗಿದ್ದ ಆರೋಪಿಗಳಿಗೆ ಮೊಬೈಲ್ ಕೊಡಲು ಬಿಕಾಸ್ ನಿರಾಕರಿಸಿದ್ದಕ್ಕೆ ಆರೋಪಿಗಳು ಅಟ್ಟಾಡಿಸಿ ಚಾಕು ಇರಿದು ಕೊಲೆ ಮಾಡಿದ್ರು. ಇನ್ನು, ಆರೋಪಿ ಮಜ್ಹರ್ ಮೇಲೆ ಈ ಹಿಂದೆ ದರೋಡೆ, ದರೋಡೆಗೆ ಯತ್ನದಂತಹ ಮೂರು ಪ್ರಕರಣ ದಾಖಲಾಗಿದ್ದು ಶಿವಾಜಿನಗರ, ಕೆಜಿ ಹಳ್ಳಿ ಸೇರಿದಂತೆ ಹಲವು ಠಾಣೆಯಲ್ಲಿ ವಾಂಟೆಡ್ ಲಿಸ್ಟ್ ನಲ್ಲಿದ್ದ.

Edited By : Nagesh Gaonkar
PublicNext

PublicNext

18/06/2022 08:35 pm

Cinque Terre

54.98 K

Cinque Terre

2

ಸಂಬಂಧಿತ ಸುದ್ದಿ