ಬೆಂಗಳೂರು: ವೇಶ್ಯೆಯರ ಜೊತೆ ಸಂಪರ್ಕಕ್ಕೆ ಹಣ ಹೊಂದಿಸಲು ಸರಗಳ್ಳತನ ಮಾಡುತ್ತಿದ್ದ ಮೂವರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಮೂವರು ಕುಖ್ಯಾತ ಸರಗಳ್ಳರನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು ಮೇ 26ರಂದು ಮಹಿಳೆಯನ್ನು ಹಿಂಬಾಲಿಸಿ ಸರಗಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳಾದ ರಮೇಶ್, ಲೋಕೇಶ್ ಹಾಗೂ ಮೊಹಮ್ಮದ್ ಮುದಾಸೀರ್ ಎಂಬುವರನ್ನು ಬಂಧಿಸಿ 140 ಗ್ರಾಂ ತೂಕದ ಆರು ಚಿನ್ನದ ಸರ ಹಾಗೂ ಎರಡು ಬೈಕ್ ಜಪ್ತಿ ಮಾಡಿದ್ದಾರೆ.
ಈ ಮುಂಚೆ ಮೂವರು ಆರೋಪಿಗಳು ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ರು. ಅಲ್ಲಿ ಪರಸ್ಪರ ಪರಿಚಿತರಾಗಿ ಸ್ನೇಹಿತರಾಗಿದ್ರು. ಜಾಮೀನು ಸಿಕ್ಕ ಬಳಿಕ ಹೊರಬಂದು ಮೂವರೂ ಟೀಂ ಕಟ್ಟಿಕೊಂಡು ಸರಗಳ್ಳತನ ಮಾಡ್ತಿದ್ರು. ಕದ್ದ ಸರವನ್ನು ವೇಶ್ಯೆಯರಿಗೆ ನೀಡಿ ತಮ್ಮ ದುಶ್ಚಟಗಳನ್ನ ತೀರಿಸಿಕೊಳ್ಳುತ್ತಿದ್ರು. ಆರೋಪಿಗಳಾದ ರಮೇಶ್ ವಿರುದ್ಧ 13ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣ ದಾಖಲಾಗಿವೆ. ಲೋಕೇಶ್ ಹಾಗೂ ಮೊಹಮ್ಮದ್ ವಿರುದ್ಧ ತಲಾ 11 ಕೇಸ್ ಗಳು ದಾಖಲಾಗಿವೆ.
Kshetra Samachara
09/06/2022 03:10 pm