ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಲಸಕ್ಕಿದ್ದ ಆಳುಗಳಿಂದಲೇ ಕಳ್ಳತನ ಮಾಡಿಸುತ್ತಿದ್ದ ಮಾಲೀಕ: ಹಿಡಿದು ಪಾಠ ಕಲಿಸಿದ ಪೊಲೀಸರು

ಬೆಂಗಳೂರು: ಆತ ಊರಲ್ಲೆಲ್ಲ ತಕ್ಕಮಟ್ಟಿಗೆ ಮರ್ಯಾದಸ್ತನಾಗಿದ್ದ. ಸ್ವಂತ ಬೊಲೆರೊ ವಾಹನ ಇಟ್ಟುಕೊಂಡು ಸಣ್ಣಪುಟ್ಟ ಕೆಲಸ‌ ಮಾಡಿಕೊಂಡಿದ್ದ. ಒಂದಿಬ್ಬರು ಹುಡುಗರು ಇವನ ಬಳಿ ಕೆಲಸ ಮಾಡ್ತಿದ್ರು. ಇದೇ ಹುಡುಗರನ್ನ ಬಳಸಿ ಇವನು ಮಾಡ್ತಿದ್ದ ಕೆಲಸ‌ ಕಳ್ಳತನ. ಇವನು ಕಳ್ಳತನ‌ ಮಾಡಿಸುತ್ತಿರೋದು ಸ್ವತಃ ಆ ಕೆಲಸದವರಿಗೂ ಗೊತ್ತಿರಲಿಲ್ಲ. ಯಾಕಂದ್ರೆ ಇವನು ಕಳ್ಳತನ‌ ಮಾಡುತ್ತಿದ್ದ ಶೈಲಿಯೇ ಹಾಗಿತ್ತು.

ಇವನ ಹೆಸರು ಹರೀಶ್. ತಲಘಟ್ಟಪುರ ಬಳಿಯ ನಾಗೇಗೌಡನಹಳ್ಳಿಯವನು.‌ ಕಳೆದ ತಿಂಗಳು ಕಗ್ಗಲಿಪುರ ಗೊಲ್ಲಹಳ್ಳಿ ಬಳಿ ನಿರ್ಮಾಣ ಹಂತ ಕಟ್ಟಡದಲ್ಲಿ ಹಾಕಿದ್ದ ಸುಮಾರು 160 ಸೆಂಟ್ರಿಂಗ್ ಪ್ಲೇಟ್ ಕಳ್ಳತನವಾಗಿತ್ತು. ಹಾಡ ಹಗಲೇ ಮಾಲಿಕನ ರೀತಿ ಈ ಹತೀಶ ಬಿಲ್ಡಿಂಗ್ ಹತ್ತಿರ ತನ್ನ ಬೊಲೆರೊ ಟೆಂಪೋದಲ್ಲಿ ಒಂದಿಬ್ರು ಹುಡುಗರನ್ನ ಕಳುಹಿಸಿ ಶೀಟ್ ನ ಇನ್ನೊಂದು ಸೈಟ್‌ಗೆ ಶಿಫ್ಟ್ ಮಾಡಿ ಅಂತ ನಾಜೂಕಾಗಿ ಕಳ್ಳತನ‌ ಮಾಡಿಸುತ್ತಿದ್ದ. ಇತ್ತ ಲಕ್ಷಾಂತರ ರೂಪಾಯಿ ಮೌಲ್ಯದ ಶೀಟ್ ಮಿಸ್ಸಿಂಗ್ ಕೇಸ್ ಬಗ್ಗೆ ಕಗ್ಗಲಿಪುರ ಇನ್ಸ್‌ಪೆಕ್ಟರ್ ರಾಮಪ್ಪ ಗುತ್ತೆದಾರ್ ಕೇಸ್ ದಾಖಲಿಸಿ ಆರೋಪಿ ಹರೀಶ್‌ನನ್ನು ಬಂಧಿಸಿ ಟೆಂಪೋ ಸಮೇತ್ ಸೆಂಟ್ರಿಂಗ್ ಪ್ಲೇಟ್ ರಿಕವರಿ ಮಾಡಿದ್ದಾರೆ. ಇನ್ನೂ ಈ ಹರೀಶ್ ಕಳ್ಳತನ‌ ಮಾಡುತ್ತಿದ್ದ ಎಂದರೆ ಯಾರು ನಂಬುತ್ತಿರಲಿಲ್ಲ. ಅಷ್ಟು ನಾಜೂಕಾಗಿ ಊರಲ್ಲಿ ಇದ್ದ ಅಂತ ಪೊಲೀಸರು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

05/06/2022 03:45 pm

Cinque Terre

22.08 K

Cinque Terre

0

ಸಂಬಂಧಿತ ಸುದ್ದಿ