ಬೆಂಗಳೂರು: ಕೈಗೆ ಮೇಜರ್ ಸರ್ಜರಿಗೆ ಒಳಪಟ್ಟಿದ್ದ ಯುವತಿ ಮೃತಪಟ್ಟಿರುವ ಘಟನೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜೀವಿಕಾ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯಲ್ಲಿ ಬಾಗೇಪಲ್ಲಿ ಮೂಲದ 21 ವರ್ಷದ ತೇಜಸ್ವಿನಿ ಮೃತ ಪಟ್ಟಿದ್ದಾಳೆ. ಮಾರತಹಳ್ಳಿ ಬಳಿಯ ಜೀವಿಕಾ ಆಸ್ಪತ್ರೆಯಲ್ಲಿ ಯುವತಿ ಸಾವನ್ನಪ್ಪಿದ್ದು ಸಾವಿಗೆ ಆಸ್ಪತ್ರೆ, ವೈದ್ಯರ ನಿರ್ಲ್ಯಕ್ಷ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಪಿ.ಜಿಯೊಂದರಲ್ಲಿದ್ದುಕೊಂಡು ಇಂಜಿನಿಯರಿಂಗ್ ಓದುತ್ತಿದ್ದ ಮೃತ ತೇಜಸ್ವಿನಿ ನಿನ್ನೆ ಬಾತ್ ರೂಮ್‌ನಲ್ಲಿ ಬಿದ್ದು ಗಾಯಗೊಂಡಿದ್ದಳು. ಮುಂಗೈ ಶಸ್ತ್ರಚಿಕಿತ್ಸೆಗಾಗಿ ಜೀವಿಕಾ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಶಸ್ತ್ರಚಿಕಿತ್ಸೆಯಾದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾಳೆ. ಆಸ್ಪತ್ರೆ ವಿರುದ್ಧ ತೇಜಸ್ವಿನಿ ಪೋಷಕರ ಆರೋಪ ಮಾಡಿದ್ದು ಘಟನಾ ಸ್ಥಳಕ್ಕೆ ಎಚ್ಎಎಲ್ ಠಾಣಾ ಪೊಲೀಸರು ಭೇಟಿ, ಪರಿಶಿಲನೆ ನಡೆಸಿದ್ದಾರೆ.
PublicNext
30/05/2022 09:39 am