ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಆ್ಯಸಿಡ್ ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾಳೆ.ಐಸಿಯುನಿಂದ ಯುವತಿ ಸ್ಪೆಷಲ್ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಆಗಿದ್ದಳು.ಆದರೆ, ನಿನ್ನೆ ಬೆಳಗ್ಗೆ ಯುವತಿಯ ಆರೋಗ್ಯದಲ್ಲಿ ಏರು-ಪೇರು ಆದ ಹಿನ್ನೆಲೆಯಲ್ಲಿ ಯುವತಿಯನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ.ಸದ್ಯಕ್ಕೆ ಯುವತಿಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಮಾಡುತ್ತಿದ್ದಾರೆ.ಯುವತಿಗೆ ಆಕ್ಸಿಜನ್ ಸಪೋರ್ಟ್ ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಯುವತಿಯ ದೇಹದಲ್ಲಿ ಇನ್ಫೆಕ್ಷನ್ ಆದ ಕಾರಣದಿಂದ ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಯುವತಿಯ ಬ್ಲಡ್ ನಲ್ಲಿ ಪ್ರೊಟೀನ್ ಕಡಿಮೆಯಾಗುತ್ತಿರುವುದು ಕೂಡ ಈಗ ವೈದ್ಯರಿಗೆ ಕಂಡು ಬಂದಿದೆ.
ಯುವತಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ಸೇಂಟ್ ಜಾನ್ಸ್ ಹಾಸ್ಪಿಟಲ್ ನ CMO ಅರವಿಂದ್ ಕಸ್ತೂರಿ ಮಾತನಾಡಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
23/05/2022 07:40 pm