ಬೆಂಗಳೂರು: ಘಟನೆ ನಡೆದು ಹೆಚ್ಚು ಕಡಿಮೆ ಒಂದು ತಿಂಗಳು ಕಳೆದರೂ ಆ್ಯಸಿಡ್ ದಾಳಿಗೊಳಗಾದ ಯುವತಿ ಇನ್ನೂ ಚೇತರಿಕೆಯಾಗಿಲ್ಲ.
ಇನ್ನೇನು ಚೇತರಿಸಿಕೊಂಡು ಮಗಳು ಮನೆಗೆ ಬರುತ್ತಾಳೆಂದು ಖುಷಿಯಲ್ಲಿದ್ದ ಕುಟುಂಬ ಮತ್ತೆ ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದೆ. ಐಸಿಯುನಿಂದ ಜನರಲ್ ವಾರ್ಡ್‌ಗೆ ಶಿಫ್ಟ್ ಆಗಿದ್ದ ಸಂತ್ರಸ್ತ ಯುವತಿಗೆ ಮತ್ತೆ ಐಸಿಯೂಗೆ ಶಿಫ್ಟ್ ಆಗಿದ್ದಾಳೆ. ಸಹಿಸಲಾಗದ ನೋವಿನಿಂದ ಬಳಲುತ್ತಿದ್ದ ಯುವತಿಯನ್ನ ಜನರಲ್ ವಾರ್ಡ್‌ನಿಂದ ಮತ್ತೆ ಐಸಿಯುಗೆ ಶಿಫ್ಟ್ ಮಾಡಲಾಗಿದೆ.
ದೇಹದ ಸರ್ಜರಿ ಮುಗಿದು, ಕತ್ತು ಮತ್ತು ಮುಖದ ಮೇಲೆ ಸರ್ಜರಿಗೆ ತಯಾರಿ ನಡೆದಿತ್ತು. ಇದೇ ವೇಳೆ ಯುವತಿಗೆ ಗಾಯದ ಸ್ಥಳದಲ್ಲಿ ಇನ್ಪೆಕ್ಷನ್ ಶುರುವಾಗಿ ನೋವಿನಿಂದ ಕಣ್ಣೀರಾಕ್ತಿದ್ದಾಳೆ. ನಿನ್ನೆ ರಾತ್ರಿಯಿಂದ ಯುವತಿ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಉಂಟಾಗಿದ್ದು, ಸರ್ಜರಿ ಮಾಡಿದ ಎದೆ ಭಾಗದಲ್ಲಿ ಫಂಗಸ್ ಕಾಟ ಉಂಟಾಗಿದೆ. ಇದ್ರಿಂದ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಯುವತಿ ಜನರಲ್ ವಾರ್ಡ್‌ನಿಂದ ಐಸಿಯುಗೆ ಶಿಫ್ಟ್‌ಮಾಡಲಾಗಿದೆ. ಐಸಿಯುನಲ್ಲಿ ಚಿಕಿತ್ಸಾ ವಿಧಾನ ಬದಲಾವಣೆ ಮಾಡಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಯುವತಿ ಆರೋಗ್ಯ ಸ್ಥಿತಿ ಬಗ್ಗೆ ಕುಟುಂಬಸ್ಥರಲ್ಲಿ ಆತಂಕ ಮೂಡಿದ್ದು, ಸದ್ಯ ಯುವತಿ ಮೂಗಿಗೆ ಅಳವಡಿಸಿರೋ ಪೈಪ್ ಮೂಲಕ ದ್ರವ ರೂಪದ ಆಹಾರ ಮಾತ್ರ ಸೇವಿಸುತ್ತಿದ್ದಾಳೆ.
ಇತ್ತ ಸೈಕೋಪಾತ್ ನಾಗನಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸೋಮವಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಆದಷ್ಟು ಬೇಗ ವಿಚಾರಣೆ ಮುಗಿಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.
PublicNext
22/05/2022 01:35 pm