ಬೆಂಗಳೂರು: ಮನೆಯವರು ಜಾಮೀನಿಗೆ ಸಪೋರ್ಟ್ ಮಾಡಿಲ್ಲ ಅಂತಾ ಕೊರಗಿ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೋಜ್ ಆಲಿಯಾಸ್ ಹೂವ ಆತ್ಮಹತ್ಯೆಗೆ ಶರಣಾಗಿರುವ ಕೈದಿ. ಡೌಟ್ ಡಕಾಯಿತಿ ಪ್ರಕರಣದಲ್ಲಿ ಚಾಮರಾಜಪೇಟೆ ಪೊಲೀಸರು 15 ದಿನಗಳಿಂದ ಹಿಂದೆ ಬಂಧಿಸಿ ಜೈಲಿಗಟ್ಟಿದ್ದರು.
ಈತ ಈ ಹಿಂದೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಮೂರು-ನಾಲ್ಕು ಜೈಲು ಸೇರಿದ್ದ. ಸಕ್ರಿಯ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ ನ ಟಾಯ್ಲೆಟ್ ವೊಂದರ ಬಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಜಾಮೀನಿಗೆ ಕುಟುಂಬಸ್ಥರು ಹಿಂದೇಟು ಜೊತೆಗೆ ಖಿನ್ನತೆಯಿಂದ ಬಳಲುತಿದ್ನಂತೆ. ಕಳೆದ ಶನಿವಾರ ಕೋರ್ಟ್ ಆವರಣದಲ್ಲಿ ಪೊಲೀಸರು ನನಗೆ ಮೋಸ ಮಾಡಿದ್ದರು ಅಂತ ಕೂಗಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದ್ರೆ ಮನೋಜ್ ಪೊಲೀಸ್ರ ಮೇಲೂ ಅಸಮಧಾನ ಹೊಂದಿದ್ದ, ಸುಖಾಸುಮ್ಮನೆ ನನ್ನನ್ನು ಕೇಸ್ ನಲ್ಲಿ ಫಿಟ್ ಮಾಡಿದ್ರು ಅಂತಲು ಕೆಲವರ ಬಳಿ ಹೇಳಿಕೊಂಡಿದ್ದಾನೆ.
Kshetra Samachara
16/05/2022 02:08 pm