ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಿಡಿಗೇಡಿಗಳಿಂದ ಬೀದಿನಾಯಿಗಳಿಗೆ ವಿಷ: 10 ಶ್ವಾನಗಳ ದಾರುಣ ಸಾವು..!!

ಬೆಂಗಳೂರು: ಕಿಡಿಗೇಡಿಗಳು ಬೀದಿನಾಯಿಗಳ ಊಟದಲ್ಲಿ ವಿಷ ಬೆರೆಸಿದ ಪರಿಣಾಮ ಸ್ಥಳದಲ್ಲೇ ಸುಮಾರು 10 ನಾಯಿಗಳು ಸಾವನ್ನಪ್ಪಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಸಂದ್ರ ಗ್ರಾಮದಲ್ಲಿ ನಡೆದಿದೆ..

ಕಳೆದ ಮೂರು ದಿನಗಳ ಹಿಂದೆ ರಾಯಸಂದ್ರ ಗ್ರಾಮದ ಅಪಾರ್ಟ್‌ಮೆಂಟ್ ಮುಂದೆ ಸುಮಾರು 10 ರಿಂದ 15ಕ್ಕೂ ಹೆಚ್ಚು ಬೀದಿನಾಯಿಗಳು ವಾಸವಾಗಿದ್ದವು ಅಲ್ಲಿನ ಸ್ಥಳೀಯರ ಮಿಕ್ಕಿರೋ ಊಟಗಳನ್ನು ನೀಡಿ ಪೋಷಣೆ ಮಾಡುತ್ತಿದ್ದರು. ಆದರೆ ಯಾರೋ ಕಿಡಿಗೇಡಿಗಳು ಅಪಾರ್ಟ್‌ಮೆಂಟ್ ಬಳಿ ಇರುವ ಬೀದಿನಾಯಿಗಳಿಗೆ ವಿಷ ಇಟ್ಟು ಸಾಯಿಸಿದ್ದಾರೆ. ಇನ್ನು ಎರಡು ನಾಯಿಗಳ ಸ್ಥಿತಿ ಗಂಭೀರವಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಇನ್ನು ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರುಣ್ ಕುಮಾರ್ ಎಂಬವರು ದೂರು ನೀಡಿದ್ದ ವಿಷಭರಿತ ಆಹಾರ ಸೇವನೆ ಕಾಯ್ದೆ 1989 ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಸಿಪಿಸಿ ಆಕ್ಟ್ ಆಧಾರದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

Edited By :
PublicNext

PublicNext

25/04/2022 08:42 pm

Cinque Terre

37.49 K

Cinque Terre

4

ಸಂಬಂಧಿತ ಸುದ್ದಿ