ಬೆಂಗಳೂರು: ಬಿಎಂಟಿಸಿ ಬಸ್ ಮಾರ್ಗ 356 ಎಂ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಬಿಎಸ್ ಬಸ್ ನಿಲ್ದಾಣ ಕಡೆಗೆ ಹೋಗುವ ಬಸ್ಸಿನಲ್ಲಿ ಬಸ್ ಪ್ರಯಾಣಿಕ ಮತ್ತು ಕಂಡಕ್ಟರ್ ನಡುವೆ ಜಗಳವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್ ಗಳಲ್ಲಿ ಈ ವಾದಗಳು ಸಾಮಾನ್ಯವಾಗಿದೆ.
ಪ್ರಯಾಣಿಕನೊಬ್ಬನ ಬಳಿ ಚಿಲ್ಲರೆ ಇಲ್ಲದೆ ಇರುವ ಎರಡು ಐನೂರು ರೂಪಾಯಿ ನೋಟುಗಳಲ್ಲಿ ಒಂದನ್ನು ನೀಡಿದ್ದಾನೆ. ಈ ವೇಳೆ ಕಂಡಕ್ಟರ್ ಅವರನ್ನು ಬಸ್ಸಿನಿಂದ ಇಳಿಯಲು ಹೇಳಿದ್ದಾರೆ. ಇದಕ್ಕೆ ಒಪ್ಪದ ಪ್ರಯಾಣಿಕ ಮತ್ತು ಕಂಡಕ್ಟರ್ ನಡುವೆ ಜಗಳ ಶುರುವಾಗಿದೆ.
ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಾಯಿತು, ನಂತರ ಪ್ರಯಾಣಿಕ ರಸ್ತೆಯ ಮೇಲೆ ಬಿಟ್ಟು ಬಸ್ ಮುಂದೆಸಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ ಈ ರೀತಿಯ ಸಮಸ್ಯೆಗಳಾಗಿದ್ದು ಬಿಎಂಟಿಸಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
11/04/2022 08:40 pm