ಬೆಂಗಳೂರು: ನಿತ್ಯ ಗಂಡ ಹೆಂಡತಿ ನಡುವೆ ಒಂದಲ್ಲ ಒಂದು ಕಿರಿಕ್ ನಡೆಯುತ್ತಲೇ ಇತ್ತು. ಎದೆಯೆತ್ತರಕ್ಕೆ ಹೆಣ್ಣು ಮಕ್ಕಳು ಚೆನ್ನಾಗಿ ಓದುತ್ತಿದ್ರು. ಇಷ್ಟು ದಿನ ಹೇಗೋ ನಡೆತ್ತಿದ್ದ ಸಂಸಾರದಲ್ಲಿ ತಡ ರಾತ್ರಿ ಸಣ್ಣದೊಂದು ಕಿರಿಕ್ ಉಂಟಾಗಿ ಪತ್ನಿಯೇ ಪತಿಯನ್ನು ಕೊಂದಿದ್ದಾಳೆ.
ಅಂದ್ರಹಳ್ಳಿಯ ಸಾಯಿಬಾಬ ನಗರದ ಉಮೇಶ್ ಕೊಲೆಯಾದ ದುರ್ದೈವಿ ಯಾಗಿದ್ದು ಪತ್ನಿ ವರಲಕ್ಷ್ಮೀ ಕ್ಷುಲ್ಲಕ ಕಾರಣಕ್ಕೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾಳೆ. ಕೊಲೆಯಾದ ಉಮೇಶ್ ಸಣ್ಣಪುಟ್ಟ ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದ. ಪತ್ನಿ ವರಲಕ್ಷ್ಮೀ ಜೊತೆ ಮದುವೆಯಾಗಿ ೨೫ ವರ್ಷವಾಗಿತ್ತು ಇಬ್ಬರು ಹೆಣ್ಣುಮಕ್ಕಳು ಕಾಲೇಜ್ ಓದುತ್ತಿದ್ದಾರೆ. ಇನ್ನೂ ಕಳದೆ ರಾತ್ರಿ ಮಧ್ಯರಾತ್ರಿ ಉಮೇಶ್ ಎಣ್ಣೆ ಮತ್ತಲ್ಲಿ ಪತ್ನಿ ವರಲಕ್ಷ್ಮೀ ಕಾಲು ಟಚ್ ಮಾಡಿದ್ದಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಪತ್ನಿ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಲೆಮಾಡಿದ್ದಾಳೆ.
ಇನ್ನೂ ಇದೇ ಕೊಲೆ ಮಾಡಿ ಮಗಳಿಗೆ ಕಾಲ್ ಮಾಡಿ ಘಟನೆ ಬಗ್ಗೆ ವರಲಕ್ಷ್ಮೀ ಮಾಹಿತಿ ಕೊಟ್ಟಿದ್ದಳು. ಬೆಳಗಾಗುವ ಹೊತ್ತಿಗೆ ಮನೆ ಯಲ್ಲಿ ಚೆಲ್ಲಿದ ರಕ್ತ ಕ್ಲೀನ್ ಮಾಡಿ ಗಂಡನನ್ನು ಆಸ್ಪತ್ರೆ ಗೆ ಸೇರಿಸಿ ಪೊಲೀಸ್ರ ಮುಂದೆ ಗಂಡ ನಾಟಕ ನೋಡೊಕೆ ಹೋಗಿದ್ರು ಅಂತ ಡ್ರಾಮಮಾಡಿದ್ದಳು.
ಇತ್ತ ಪೊಲೀಸರು ಸ್ಫಾಟ್ ಮಹಜತ ಮಾಡಿದಾಗ ನೆಲದ ಮೇಲೆ ರಕ್ತ ವರೆಸಿದ್ದ ವರಲಕ್ಷ್ಮೀ ಗೋಡೆ ಮೇಲಿನ ರಕ್ತದ ಕಲೆಯನ್ನೂ ಹಾಗೇ ಬಿಟ್ಟು ಲಾಕ್ ಆಗಿದ್ದಾಳೆ. ಇನ್ನೂ ಕಳೆದ ವಾರ ಕೂಡ ಸಂಸಾರದಲ್ಲಿ ಸಣ್ಣ ಕಿರಿಕ್ ಆಗಿತ್ತು ಅಂತ ಸ್ನೇಹಿತ್ರ ಬಳಿ ಉಮೇಶ್ ಹೇಳಿಕೊಂಡಿದ್ನಂತೆ
ಸದ್ಯ ಬ್ಯಾಡರಹಳ್ಳಿ ಪೊಲೀಸ್ರು ಕೇಸ್ ಬುಕ್ ಮಾಡಿ ಪತ್ನಿ ವರಲಕ್ಷ್ಮೀ ಯನ್ನ ಅರೆಸ್ಟ್ ಮಾಡಿದ್ದಾರೆ. ಇತ್ತ ಕೋಪದ ಕೈಗೆ ಬುದ್ದಿ ಕೊಟ್ಟ ವರಲಕ್ಷ್ಮೀ ಪತಿ ಕಳೆದುಕೊಂಡು ಜೈಲು ಸೇರಿದ್ದಾಳೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
11/04/2022 08:05 pm