ಬೆಂಗಳೂರು: ಶ್ರೀರಾಮಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಮತ್ತು ಆತನ ಸಹಚರನನ್ನು ಬಂಧಿಸಿದ್ದಾರೆ.
ರೌಡಿಶೀಟರ್ ನಾರಾಯಣ ಹಾಗೂ ಈಶ್ವರ್ ಬಂಧಿತ ಆರೋಪಿಗಳಾಗಿದ್ದು, ನಗರದಲ್ಲಿ ಗಾಂಜಾ ಮಾರಾಟ ಮಾಡಲು ವಿಶಾಖಪಟ್ಟಣದಿಂದ ಗಾಂಜಾವನ್ನು ಆರೋಪಿಗಳು ತರಿಸಿಕೊಳ್ಳುತ್ತಿದ್ದರು. ಆಂಧ್ರದಿಂದ ಬಂದ ಗಾಂಜಾವನ್ನು ರಿಟೈಲ್ ಲೆಕ್ಕದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಸಾಗಾಟ ಮಾಡುವಾಗ ಶ್ರೀರಾಮಪುರ ಪೊಲೀಸರಿಗೆ ಲಾಕ್ ಆಗಿದ್ದಾರೆ. ಕೃಷ್ಣ ಪ್ಲೋರ್ ಮಿಲ್ ರಸ್ತೆಯಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳಿಂ 22 kg ಗಾಂಜಾ ಮತ್ತು ಒಂದು ದ್ವಿಚಕ್ರ ವಾಹನ ಸೀಜ್ ಮಾಡಿದ್ದಾರೆ.
PublicNext
10/04/2022 06:01 pm