ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯ್ಯೂಟೂಬ್ ನೋಡಿ ಬುಲೆಟ್ ಬೈಕ್ ಅಬೇಸ್ ಮಾಡ್ತಿದ್ದ 7 ಆರೋಪಿಗಳು ಅಂದರ್

ಬೆಂಗಳೂರು: ವಿದ್ಯಾವಂತರಾಗಿದ್ದ ಅವ್ರು ಕೆಲಸಕ್ಕಾಗಿ ಪರಿಶ್ರಮ ಪಟ್ಟಿದ್ದರೆ ಒಂದೊಳ್ಳೆ ಕಂಪೆನಿಯಲ್ಲಿ ಕೆಲಸ‌‌ ಸಿಕ್ಕಿ, ಕೈ ತುಂಬಾ ಸಂಬಳ ಪಡೆಯುತ್ತಿದ್ರು. ಆದರೆ, ಕಷ್ಟಪಡದೆ ಸುಲಭವಾಗಿ ಹಣ ಗಳಿಸುವ ದುರಾಸೆಗೆ ಬಿದ್ದ 7 ಮಂದಿ ವಿದ್ಯಾವಂತರು ಇದೀಗ ಕಂಬಿ ಹಿಂದೆ ಸರಿದಿದ್ದಾರೆ.

ಸಿನಿಮಾಗಳಿಂದ ಪ್ರಭಾವಿತರಾಗಿ ಐಷಾರಾಮಿ ಲೈಫ್ ಲೀಡ್ ಮಾಡಲು ನಗರದಲ್ಲಿ ದುಬಾರಿ ಎನ್ ಫೀಲ್ಡ್ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ 7 ಮಂದಿ ಅಂತಾರಾಜ್ಯ ಖದೀಮರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ವಿಜಯ್, ಹೇಮಂತ್, ಗುಣಶೇಖರ್ ರೆಡ್ಡಿ, ಭಾನುಮೂರ್ತಿ, ಪುರುಷೋತ್ತಮ್, ಕಾರ್ತಿಕ್ ಹಾಗೂ ಕಿರಣ್‌ ನನ್ನು ಬಂಧಿಸಿ 68 ಲಕ್ಷ ಮೌಲ್ಯದ 30 ಬೈಕ್‌ಗಳನ್ನ ಜಪ್ತಿ ಮಾಡಿದ್ದಾರೆ. ಆರೋಪಿಗಳೆಲ್ಲರೂ ಒಂದೇ ಏರಿಯಾದವರಾಗಿದ್ದು ಎಂಜಿನಿಯರ್, ಎಂಬಿಎ ಸೇರಿದಂತೆ ಉನ್ನತ ಶಿಕ್ಷಣ ಪಡೆದಿದ್ದರು‌. ಲಾಕ್ ಡೌನ್ ವೇಳೆ ತಾವು ಅಂದುಕೊಂಡ ಕೆಲಸ ಸಿಗದಿದ್ದರಿಂದ ಹತಾಶೆಗೊಳಗಾಗಿದ್ದರು. ಅಲ್ಲದೆ, ಸಿನಿಮಾ ಹುಚ್ಚಿನ ಆರೋಪಿಗಳು ಸಿನಿಶೈಲಿಯಲ್ಲಿ ಕಡಿಮೆ ಅವಧಿಯಲ್ಲಿ ಬೇಗನೆ ಶ್ರೀಮಂತರಾಗುವ ಕನಸು ಕಂಡಿದ್ದರು‌.

ಬೈಕ್ ಕಳ್ಳತನ ಹೇಗೆ ಮಾಡುವುದರ ಬಗ್ಗೆ ಯ್ಯೂಟೂಬ್ ನಲ್ಲಿ ನೋಡಿ ಕಲಿತು, ಫೀಲ್ಡ್ ಗಿಳಿದಿದ್ದ ಆರೋಪಿಗಳು ಪಬ್ಲಿಕ್‌ ಪ್ಲೇಸ್ ನಲ್ಲಿದ್ದ ಬುಲೆಟ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡಿ ಆಂಧ್ರದಲ್ಲಿ‌‌ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಇತ್ತೀಚೆಗೆ ಬನಶಂಕರಿ‌‌ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ‌ ಪ್ರಕರಣ ದಾಖಲಿಸಿದ್ದ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ, ಪಿಎಸ್ಐ ಮಂಜುನಾಥ್ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Edited By : Nagesh Gaonkar
PublicNext

PublicNext

04/04/2022 10:38 pm

Cinque Terre

32.74 K

Cinque Terre

0

ಸಂಬಂಧಿತ ಸುದ್ದಿ