ಬೆಂಗಳೂರು: ಯುಗಾದಿ ಹಬ್ಬದ ಸಂದರ್ಭದಲ್ಲಿ ಯಾರು ಇಲ್ಲದಿರುವಾಗ ಉದ್ಯಮಿ ಮನೆಗೆ ನುಗ್ಗಿ 10 ಲಕ್ಷ ರೂ. ಮೌಲ್ಯದ ಡೈಮಂಡ್ ಕಳ್ಳತನ ಮಾಡಿದ್ದಾರೆಂದು ದೂರು ದಾಖಲಾಗಿದೆ.
ಉದ್ಯಮಿ ರಂಜಿತಾ ಮೆಟ್ರಾನಿ ಎಂಬುವರ ಯುಗಾದಿ ಹಬ್ಬಕ್ಕೆ ತಮಿಳುನಾಡಿನ ಸಂಬಂಧಿಕರ ಮನೆಗೆ ತೆರಳಿದ್ದರು. ಹಬ್ಬ ಮುಗಿಸಿಕೊಂಡು ನಿನ್ನೆ ಸಂಜೆ ಕೋರಮಂಗಲದಲ್ಲಿರುವ 3ನೇ ಬ್ಲಾಕ್ನಲ್ಲಿರುವ ಮನೆಗೆ ಬಂದಾಗ ಮನೆಯ ಗ್ರೀಲ್ ಹಾಗೂ ಬೀಗ ಮುರಿದು ಖದೀಮರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಕೋರಮಗಲ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆಗೆ ಬೀಸಿದ್ದಾರೆ.
Kshetra Samachara
04/04/2022 03:04 pm