ಬೆಂಗಳೂರು: ಬಿಟಿಎಂ ಲೇಔಟ್‌ನಲ್ಲಿ ಪೊಗದಸ್ತಾಗಿ ಬೆಳೆದು ನಿಂತು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಆರೋಗ್ಯಪೂರ್ಣ, ಶಕ್ತಿಯುತ ಮರಗಳನ್ನು ಕಡಿದು ಧರೆಗುರುಳಿಸಲಾಗಿದೆ! ಬಿಟಿಎಂ ಲೇಔಟ್ ನ ಐಎಎಸ್ ಕಾಲೊನಿಯಲ್ಲಿನ ಮೂರು ಬಲಿಷ್ಠ ವೃಕ್ಷಗಳನ್ನು ಅಪರಿಚಿತ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.
ಈ ಬಗ್ಗೆ bbmp ಅವರನ್ನು ಕೇಳಿದಾಗ ಅವರಿಗೆ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ! ಈ ಕಾಲೊನಿಯಲ್ಲಿಯೇ ಹಲವು ಐಎಎಸ್, ಐಪಿಎಸ್ ಅಧಿಕಾರಿಗಳ ʼಅರʼಮನೆಗಳಿವೆ. ಪರೋಪಕಾರಿ ಮರಗಳನ್ನು ಕರುಣೆ ತೋರದೆ ಕಡಿದ ತಿಳಿಗೇಡಿಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
31/03/2022 08:19 am