ಯಲಹಂಕ: ಮಾರ್ಚ್ 18ರಂದು ಯಲಹಂಕ ಸಿಇಎನ್ ಪೊಲೀಸ್ ಠಾಣೆಗೆ ದಾಖಲಾದ ದೂರಿನಿಂದ, ಕ್ರಿಪ್ಟೋ ಕರೆನ್ಸಿ ಜಾಹೀರಾತಿನ ಮೂಲಕವೂ ಜನರನ್ನು ಮೋಸ ಮಾಡುವ ಜಾಲವೊಂದು ಸಕ್ರಿಯವಾಗಿದೆ ಎಂಬುದು ಬೆಳಕಿಗೆ ಬಂದಿದೆ..Abhishe_Akwane ಪ್ರೋಫೈಲ್ ನಲ್ಲಿ ಕ್ರಿಪ್ಟೊ ಕರೆನ್ಸಿ ಮೂಲಕ ಅಧಿಕ ಹಣಗಳಿಸಬಹುದು ಎಂಬ ಮೆಸೇಜನ್ನು ಹಾಕಲಾಗಿತ್ತು..Youngest Crypto Trador Minimum 60% ಆ್ಯಡ್ ನ ಹಾಕಿದ್ರು. ಈ ಅಕೌಂಟ್ ಗೆ 10ಸಾವಿರ ಫಾಲೋವರ್ಸ್ ಇರುವುದನ್ನ ನೋಡಿ ಜನ ಮೋಸ ಹೋಗ್ತಿದ್ದಾರೆ..
ದೂರಿನನ್ವಯ ಯಲಹಂಕ ಸಿಇಎನ್ ಇನ್ಸ್ಪೆಕ್ಟರ್ ರಾಮನಗೌಡ, ಸಂತೋಷ್ ರಾಮ್ ತಂಡ, ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಾರೋಗೇರಿಯ ಕಿರಣ್ ಭರತೇಶ್ & ಅರ್ಶದ್ ಮೊಹಿದ್ದೀನ್ ಎಂಬ ಇಬ್ಬರನ್ನು ಬಂಧಿಸಿ ಸಾವಿರಾರು ರೂಪಾಯಿ ನಗದು, ಎರಡು ಮೊಬೈಲ್ ಮತ್ತು ನಕಲಿ ಸಿಮ್ ಕಾರ್ಡ್ಗಳನ್ನ ವಶಕ್ಕೆ ಪಡೆದಿದ್ದಾರೆ....ಇನ್ನು ಈಶಾನ್ಯ ವಿಭಾಗದ DCP ಮಾತನಾಡಿ ಜನ ಅಧಿಕ ಹಣದ ಆಸೆ, ಆಮಿಷಗಳಿಗೆ ಒಳಗಾಗಬೇಡಿ ಎಂದು ನಗರ ಮತ್ತು ರಾಜ್ಯದ ಜನತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ..
PublicNext
28/03/2022 05:56 pm