ಯಲಹಂಕ : ಮಾದಕವಸ್ತು ಗಾಂಜಾವನ್ನು ಸಣ್ಣ ಸಣ್ಣ ಪೊಟ್ಟಣ ಮಾಡಿ, ವಿದ್ಯಾರ್ಥಿಗಳು ಮತ್ತು ಐಷಾರಾಮಿ ಜನರನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡ್ತಿದ್ದ ಇಬ್ಬರು ಖದೀಮರು ಪೊಲೀಸರ ಅತಿಥಿಗಳಾಗಿದ್ದಾರೆ.
ಬೆಂಗಳೂರು ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಪೊಲೀಸರು ಮುಖ್ಯ ಆರೋಪಿ ಶೇಖ್ ಸಲ್ಮಾನ್, ಆರೋಪಿ ಶೇಖ್ ಆಲಿ ಎಂಬುವವರನ್ನು ಬಂಧಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರ ಲೇಔಟ್ ನಲ್ಲಿ ತಮ್ಮ ಖರಾಮತ್ತು ತೋರುತ್ತಿದ್ದರು ಎನ್ನಲಾಗಿದೆ.
ಬಂಧಿತರಿಂದ 60,000 ಮೌಲ್ಯದ ಸುಮಾರು 1.ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಂಧಿತರ ಇತರ ಸಹಚರರು, ನೆಟ್ವರ್ಕ್ ಬಗ್ಗೆ ವಿದ್ಯಾರಣ್ಯಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇತ್ತೀಚೆಗೆ ಡ್ರಗ್ಸ್ ಪೆಡ್ಲರ್ಗಳ ಬಗ್ಗೆ ಬೆಂಗಳೂರು ಪೊಲೀಸರು ಕಣ್ಗಾವಲನ್ನು ಹೆಚ್ಚಿಸಿದ್ದಾರೆ.
Kshetra Samachara
08/03/2022 06:07 pm