ಬೆಂಗಳೂರು: ವೆಹಿಕಲ್ಸ್ ಗಳನ್ನೇ ಟಾರ್ಗೇಟ್ ಮಾಡಿ ಕನ್ನ ಹಾಕಿ ಎಸ್ಕೇಪ್ ಮಾಡುತ್ತಿದ್ದ ಖತರ್ನಾಕ್ ಟೀಂಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಬಜಾರ್ ನಲ್ಲಿ ಬೇಡಿಕೆ ಇರುವ ಬೈಕ್ ಅನ್ನೇ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್ ಮತ್ತು ಐಷಾರಾಮಿ ಇನ್ನೋವಾ ಕಾರುಗಳನ್ನು ಕಳ್ಳತನ ಮಾಡ್ತಿದ್ದ ಮೂವರು ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.
ಸಾಲು ಸಾಲು ನಿಂತಿರೊ ಡಿಯೋ ಬೈಕ್,ಲೈನಾಗಿ ನಿಲ್ಲಿಸಲಾಗಿರೊ ಐಷಾರಾಮಿ ಇನ್ನೋವಾ ಕಾರು, ಮಾಲೀಕರ ಮುಖದಲ್ಲಿ ಕಳೆದುಕೊಂಡ ವಾಹನ ವಾಪಸ್ ಪಡೆದ ಖುಷಿ.ಅಷ್ಟಕ್ಕೂ ಇವತ್ತು ಮಾಲೀಕರಿಗೆ ಸೇರಿದ್ದು 40 ವಿವಿಧ ಕಂಪನಿಯ ಬೈಕ್,ಐಷಾರಾಮಿ ಕಾರುಗಳು.
ಹೌದು ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು ಉದಯ್ ಕುಮಾರ್ ಮತ್ತು ಅಸ್ಲಂ ಸೊಲೇಜಾ.19 ವರ್ಷದ ಉದಯ್ ಅರೆಕೆರೆ ನಿವಾಸಿ ಆದ್ರೆ 37 ವರ್ಷದ ಈ ಅಸ್ಲಂ ಸೊಲೇಜಾ ಕೋಲಾರ ಮೂಲದವನು.ಇಬ್ಬರು ಪರಿಚಯಸ್ಥರೇ ಆದರೂ ಪ್ರತ್ಯೇಕವಾಗಿ ಬೈಕ್ ಕಳ್ಳತನಕ್ಕೆ ಇಳಿತಿದ್ರು.ಇನ್ನೂ ಹೆಚ್ಚಿನ ಬೇಡಿಕೆ ಇರೊ ಡಿಯೋ ಬೈಕ್ ಗಳನ್ನೇ ಕದ್ದು ಬೈಕ್ ಗಳನ್ನು ಆರ್.ಸಿ ಕಾರ್ಡ್ ನಂತರ ಕೊಡೋದಾಗಿ ಪರಿಚಯಸ್ಥರಿಗೆ ಮಾರಾಟ ಮಾಡ್ತಿದ್ರು. ನಗರದ ಹಲವೆಡೆ ಹೊರಗೆ ನಿಲ್ಲಿಸಿದ್ದ ಬೈಕ್ ಗಳ ಲಾಕ್ ಮುರಿದು ಕೈಚಳಕ ತೋರಿಸ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಇನ್ಸ್ ಪೆಕ್ಟರ್ ಚಂದ್ರಕಾಂತ್ ನೇತೃತ್ವದ ಹುಳಿಮಾವು ಪೊಲೀಸರು 30 ಲಕ್ಷದ 45 ಸಾವಿರ ಮೌಲ್ಯದ ತಂಡ ವಿವಿಧ ಕಂಪನಿಯ 40 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂ ಬೇಗೂರು ಠಾಣೆ ಪೊಲೀಸರು ನಟೋರಿಯಸ್ ಅಂತರ್ ರಾಜ್ಯ ಕಾರುಗಳ್ಳರ ಹೆಡೆಮುರಿ ಕಟ್ಟಿದ್ದಾರೆ ಗೋಪಿ,ಮೋಹನ್,ಇಮ್ಯಾನ್ಯುವೆಲ್ ಈ ಪ್ರಕರಣದ ಆರೋಪಿಗಳು ತಮಿಳುನಾಡು ಮೂಲದವರಾದ ಮೂವರು ಆರೋಪಿಗಳು ಬೆಂಗಳೂರಿನ ವಿವಿಧೆಡೆ ನಿಲ್ಲಿಸಲಾಗಿದ್ದ ಇನ್ನೋವಾ ಕಾರುಗಳನ್ನ ಕಳ್ಳತನ ಮಾಡ್ತಿದ್ರು. ಅಪಘಾತವಾಗಿ ಸ್ಕ್ರಾಪ್ ಆಗಿರೊ ಕಾರುಗಳ ನಂಬರ್ ಹಾಗೂ ಚಾರ್ಸಿ ನಂಬರ್ ಹಾಕಿ ಅದನ್ನು ಮಾರಾಟ ಮಾಡ್ತಿದ್ರು.ಸದ್ಯ ಆರೋಪಿಗಳಿಂದ 1 ಕೋಟಿ 55 ಲಕ್ಷ ಮೌಲ್ಯದ 6 ಇನ್ನೋವಾ ಕಾರು,ಒಂದು ಇಟಿಯೋಸ್,ಮತ್ತೊಂದು ಇಟಿಯೋಸ್ ಲಿವಾ ಕಾರು ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಕಾರು ಕಳದುಕೊಂಡು ಮತ್ತೆ ಕಾರು ಸಿಗಲ್ಲ ಅಂದುಕೊಂಡಿದ್ದವರು ಪೊಲೀಸ್ರ ಕಾರ್ಯಕ್ಕೆ ಮೆಚ್ಚಗೆ ವ್ಯಕ್ತ ಪಡಿಸಿದ್ದಾರೆ
ಸದ್ಯ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿರೊ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದು.ಈ ಕಳ್ಳರ ಜಾಲ ಮತ್ತಷ್ಟು ಹಬ್ಬಿರೋದನ್ನ ಬೇಧಿಸುತ್ತಿದ್ದಾರೆ.
-ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
08/03/2022 10:14 am