ಆನೇಕಲ್: ಹೋಟೆಲ್‌ನಲ್ಲಿ ಕಳ್ಳತನ ತಡೆಯಲು ಮುಂದಾದ ಸೆಕ್ಯೂರಿಟಿ ಗಾರ್ಡ್‌ನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಕರ್ನಾಟಕದ ಗಡಿಭಾಗದ ಹೊಸೂರು ದರ್ಗಾ ಬಳಿ ನಡೆದಿದೆ.
ತಿರುಣಾಮಲೈ ಮೂಲದ ದಾಮೋದರ್ (60) ಮೃತಪಟ್ಟ ದುರ್ದೈವಿ. ಇಲ್ಲಿನ ಹೂಸೂರು ದರ್ಗಾ ಬಳಿ ಇರುವ ರಾಜಭೋಜನಂ ಎಂಬ ಹೋಟೆಲ್‌ನಲ್ಲಿ ದಾಮೋದರ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ದುಷ್ಕರ್ಮಿಗಳು ಕಳೆದ ರಾತ್ರಿ ಮೇಲ್ಚಾವಣಿ ಒಡೆದು ಹೋಟೆಲ್ ಒಳಗೆ ಪ್ರವೇಶಿಸಿದ್ದರು. ಈ ವೇಳೆ ರೂಮ್‌ನಲ್ಲಿ ಮಲಗಿದ್ದ ದಾಮೋದರ್ ಎಚ್ಚರಗೊಂಡು ಹೊರಗೆ ಬಂದಿದ್ದಾರೆ. ಇದರಿಂದಾಗಿ ಕಳ್ಳರು ದಾಮೋದರನನ್ನು ಚಾಕುನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಹೋಟೆಲ್ ಮಾಲೀಕ ಮೂರ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
27/02/2022 07:33 pm