ದೇವನಹಳ್ಳಿ : ಸರ್ಕಾರಿ ಬಾಲಕರ ಪರೀವಿಕ್ಷಣಾಲಯದಲ್ಲಿದ್ದ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕರು ಹೋಮ್ ಗಾರ್ಡ್ ಮೇಲೆ ಹಲ್ಲೆ ನಡೆಸಿ 7 ಬಾಲಕರು ಪರಾರಿಯಾಗಿದ್ದಾರೆ.
ದೇವನಹಳ್ಳಿ ಪಟ್ಟಣದ ಪ್ರಶಾಂತ ನಗರದಲ್ಲಿರುವ ಸರ್ಕಾರಿ ಬಾಲಕರ ಪರೀವಿಕ್ಷಣಾಲಯದಲ್ಲಿ ಘಟನೆ ನಡೆದಿದ್ಧು, ಘಟನೆಯಲ್ಲಿ ಹೋಮ್ ಗಾರ್ಡ್ ಪ್ರತಾಪ್ ಜಿ ಯವರು ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕರಿಂದ ಹಲ್ಲೆಗೆ ಒಳಗಾಗಿದ್ದಾರೆ, ಜನವರಿ 25ರ ರಾತ್ರಿ 7 ಗಂಟೆಯ ಸಮಯದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ,
ಗಾಯಗೊಂಡಿರುವ ಪ್ರತಾಪ್ ಬಾಲಕರ ಪರೀವಿಕ್ಷಣಾಲಯದಲ್ಲಿ ಬಾಲಕಿಯನ್ನ ಊಟ ತಿಂಡಿಗೆ ಬಿಟ್ಟು ನಂತರ ರೂಮ್ ಗೆ ಕಳಿಸಿ ಲಾಕ್ ಮಾಡುವ ಕೆಲಸ ಮಾಡುತ್ತಿದ್ದರು ಜನವರಿ 25 ರ ರಾತ್ರಿ ಊಟದ ನಂತರ 5 ಬಾಲಕರು ರೂಮ್ ಗೆ ಹೋಗುವಂತೆ ಹೇಳಿದ್ದಾಗ ಗಲಾಟೆ ಮಾಡಿ, ಪ್ರತಾಪ್ ತಲೆಗೆ ಕಬ್ಬಿಣದ ತೂಕ ಹಾಕುವ ಕೆ.ಜಿ ಕಲ್ಲಿನಿಂದ ತಲೆಗೆ ಹೊಡಿದಿದ್ದಾರೆ, ನಂತರ ಹೋಮ್ ಗಾರ್ಡ್ ನಿಂದ ಕೀ ತೆಗೆದುಕೊಂಡು ಪರೀವಿಕ್ಷಣಾಲಯದಿಂದ ಪರಾರಿಯಾಗಿದ್ದಾರೆ, ಇವರ ಜೊತೆ ಮತ್ತಿಬ್ಬರು ಬಾಲಕರು ಸಹ ಪರಾರಿಯಾಗಿದ್ದಾರೆ, ದೇವನಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರು ಬಾಲಕರ ಪತ್ತೆ ಮಾಡಿ ಪರೀವಿಕ್ಷಣಾಲಯಕ್ಕೆ ಕಳಿಸಲಾಗಿದೆ.
Kshetra Samachara
05/02/2022 12:51 pm