ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಸ್ನೇಹಿತನೊಂದಿಗೆ ಎಣ್ಣೆ ಪಾರ್ಟಿ; ತಣ್ಣಗೆ ಚಾಕು ಇರಿದು ಪರಾರಿಯಾದ!

ನೆಲಮಂಗಲ: ಸ್ನೇಹಿತನ ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ ಕಿರಾತಕನೋರ್ವ, ಕ್ಷುಲಕ ಕಾರಣಕ್ಕೆ ಸ್ನೇಹಿತನಿಗೆ ಚಾಕು ಇರಿದು ಎಸ್ಕೇಪ್ ಆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿಯ ಸಿದ್ದನಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

20 ವರ್ಷಗಳಿಂದ ಸಿದ್ದನಹೊಸಹಳ್ಳಿಯಲ್ಲಿ ವಾಸವಿದ್ದ ಕಾರವಾರದ ಪ್ರಶಾಂತ್(38) ಟಿಪ್ಪರ್ ಲಾರಿ ಮೆಕ್ಯಾನಿಕ್ ಆಗಿದ್ದ. 3-4 ತಿಂಗಳ ಹಿಂದೆ ಮಾದನಾಯಕನಹಳ್ಳಿಯಲ್ಲಿ ವಾಸವಿದ್ದ ಸೇಲಂ ಮೂಲದ ಸತೀಶ್(43) ಆಟೋ ಚಾಲಕನಾಗಿ ಪರಿಚಯವಾಗಿ, ಕ್ರಮೇಣ ಸ್ನೇಹಿತರಾಗಿದ್ರು.

4 ದಿನಗಳ ಹಿಂದೆ ಬೆಳ್ಳಂಬೆಳಿಗ್ಗೆ ಎಣ್ಣೆ ಪಾರ್ಟಿ ಮಾಡೋಣ ಎಂದು ಪ್ರಶಾಂತ್ ಗೆ ಪೀಡಿಸಿದ ಸತೀಶ್, ಆತನ ಮನೆಯಲ್ಲೇ ಪಾರ್ಟಿ ಮಾಡಿದ್ರು. ಈ ವೇಳೆ ಎಣ್ಣೆ ಮತ್ತಲ್ಲಿ ತೇಲಾಡ್ತಿದ್ದ ಸತೀಶ, ಏಕಾಏಕಿ ಚಾಕುವಿನಿಂದ ಪ್ರಶಾಂತ್ ಕುತ್ತಿಗೆ, ಬೆನ್ನಿಗೆ ಇರಿದು ಪರಾರಿ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ರಸ್ತೆಗೆ ಬಂದು ಬಿದ್ದಿದ್ದ ಪ್ರಶಾಂತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ರು. ಸದ್ಯ ಪ್ರಾಣಾಪಾಯದಿಂದ ಪ್ರಶಾಂತ್ ಪಾರಾಗಿದ್ದಾನೆ. ಪೊಲೀಸ್ರು ಕೇಸ್ ದಾಖಲಿಸಿ, ಸತೀಶನಿಗೆ ಬಲೆ ಬೀಸಿದ್ದಾರೆ.

Edited By : Nagesh Gaonkar
PublicNext

PublicNext

04/02/2022 03:10 pm

Cinque Terre

21.83 K

Cinque Terre

0

ಸಂಬಂಧಿತ ಸುದ್ದಿ