ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನಧಿಕೃತ ಮಸೀದಿಗೆ ಲಗ್ಗೆ ಇಟ್ಟ ಹಿಂದೂ ಸಂಘಟನೆಗಳು

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಲ್ಲಿ ಅನಧಿಕೃತವಾಗಿ ತಲೆ ಎತ್ತಿದ ಮಸೀದಿಗೆ ಹಿಂದೂಪರ ಸಂಘಟನೆಗಳು ಲಗ್ಗೆ ಇಟ್ಟಿವೆ.

ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ Exclusive ಸುದ್ದಿ ಮಾಡಿತ್ತು. ರೈಲ್ವೇ ನಿಲ್ದಾಣದಲ್ಲಿ 6 ಶೌಚಾಲಯಗಳನ್ನು ಮುಚ್ಚಿಸಿ ಮುಸ್ಲಿಮರು ಮಸೀದಿ ನಿರ್ಮಿಸಿಕೊಂಡು ನಮಾಜ್ ಮಾಡುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳ ನಿರ್ಮಾಣ ಸರಿಯಲ್ಲ ಎಂಬ ಕಾರಣಕ್ಕೆ ಇಲ್ಲಿಗೆ ಇಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ, ಬಜರಂಗದಳ, ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಮಹಾಸಭಾ, ವಿಶ್ವ ಹಿಂದೂ ಪರಿಷದ್ ಸ್ವಯಂ ಸೇವಕರು ಇಂದು ಲಗ್ಗೆ ಇಟ್ಟಿದ್ದಾರೆ.‌ ಈ ಸಂಬಂಧ ರೈಲ್ವೇ ನಿಲ್ದಾಣ ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

Edited By : Nagesh Gaonkar
PublicNext

PublicNext

31/01/2022 11:06 pm

Cinque Terre

54.38 K

Cinque Terre

50

ಸಂಬಂಧಿತ ಸುದ್ದಿ