ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಗೋಮಾಂಸ ಮಾರಾಟ ಅಡ್ಡೆಗೆ ದಾಳಿ, ಸೊತ್ತು ವಶ

ನೆಲಮಂಗಲ: ಬೆಳ್ಳಂಬೆಳಿಗ್ಗೆ ನಗರದಲ್ಲಿ ಅನಧಿಕೃತ ಕಸಾಯಿಖಾನೆಯಲ್ಲಿ ಗೋಮಾಂಸ ಮಾರಾಟ ದಂಧೆಯ ಖಚಿತ ಮಾಹಿತಿ ಆಧಾರದ ಮೇಲೆ ಹಿಂದೂ ಜಾಗರಣಾ ವೇದಿಕೆ ಹಾಗೂ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದರು.

ಮುನ್ನಾ ಎಂಬಾತ ತಾಲ್ಲೂಕಿನ ಇಸ್ಲಾಂಪುರ ಗ್ರಾಮದಿಂದ ಗೋಮಾಂಸ ಸಾಗಾಟ ಮಾಡಿಕೊಂಡು ರೇಣುಕಾ ನಗರದ ಶೆಡ್ ನಲ್ಲಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ತಿಳಿದ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಪ್ರಮುಖ್ ಹೇಮಂತ್ ಮತ್ತು ಭಜರಂಗದಳದ ಶಶಿಕಿರಣ್ ಸೇರಿದಂತೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಈ ಕುರಿತು ಕೂಡಲೇ ನೆಲಮಂಗಲ ಟೌನ್ ಪೊಲೀಸರಿಗೆ ಮತ್ತು ಪಶು ಸಂಗೋಪನೆ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಇನ್ಸ್‌ಪೆಕ್ಟರ್ ಎ.ವಿ.ಕುಮಾರ್ ಧಾವಿಸಿ ಪರಿಶೀಲನೆ ನಡೆಸಿ, ಗೋಮಾಂಸ ಮತ್ತು ಇತರ ಬಳಕೆ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Edited By : Manjunath H D
PublicNext

PublicNext

14/01/2022 04:07 pm

Cinque Terre

46.2 K

Cinque Terre

2

ಸಂಬಂಧಿತ ಸುದ್ದಿ