ಆನೇಕಲ್: ಸ್ವಿಪ್ಟ್ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮೇಲೆ ನಟ್ಟ ನಡು ರಸ್ತೆಯಲ್ಲಿಯೇ ಶೂಟೌಟ್ ಮಾಡಿರೋ ಘಟನೆ ಆನೇಕಲ್ ಪಟ್ಟಣದ ಶಿವಾಜಿ ವೃತ್ತದ ಬಳಿ ನಡೆದಿದೆ.
ಅನೇಕಲ್ ಪಟ್ಟಣದ ಕೋರ್ಟ್ ಗೆ ಬಂದಿದ್ದ ವ್ಯಕ್ತಿಯ ಕೆ.ಎ.01,ಎಮ್.ಜೆ.3311 ನಂಬರಿನ ಸ್ವಿಪ್ಟ್ ಕಾರನ್ನ ಅಡ್ಡಗಟ್ಟಿ ಅಪರಿಚಿತರು ಗುಂಡು ಹಾರಿಸಿದ್ದಾರೆ. ಸ್ವಿಪ್ಟ್ ಕಾರ್‌ನಲ್ಲಿ ಸಾಕಷ್ಟು ದಾಖಲೆಗಳೂ ಇವೆ. ಇದೇ ಕಾರ್‌ನ ಬಲಬದಿಯ ಗಾಜು ಒಡೆದ ಕಿರಾತಕರು ವ್ಯಕ್ತಿಯ ಕತ್ತಿನ ಭಾಗಕ್ಕೆ ಶೂಟ್ ಪರಾರಿ ಆಗಿದ್ದಾರೆ.ಮಾರಕಾಸ್ತ್ರಗಳಿಂದಲೂ ದಾಳಿ ಮಾಡಿದ್ದಾರೆ.
ಆದರೆ ಕಾರಣ ಏನೂ ಅನ್ನೋದು ಇನ್ನೂ ತಿಳಿದು ಬಂದಿಲ್ಲ.
PublicNext
05/01/2022 09:39 pm