ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಕುಬೇರ' ಡಿ ಗ್ರೂಪ್ ನೌಕರ ಈ ಗಿರಿ; ಎಸಿಬಿ ಅಧಿಕಾರಿಗಳೇ ನಿಬ್ಬೆರಗು

ಬೆಂಗಳೂರು: ಬೆಂಗಳೂರು, ಬೆಳಗಾವಿ, ಕಲಬುರಗಿ, ದೊಡ್ಡಬಳ್ಳಾಪುರ ಸಹಿತ ರಾಜ್ಯದ 60ಕ್ಕೂ ಅಧಿಕ ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದೇ ರೀತಿ ಬೆಂಗಳೂರು ಹೊರವಲಯ ದಾಸರಹಳ್ಳಿ ಸಮೀಪದ ಬಾಗಲಗುಂಟೆಯ ಬಿಡಿಎಸ್ ಬಡಾವಣೆಯಲ್ಲಿರುವ ಡಿ ಗ್ರೂಪ್ ನೌಕರ ಗಿರಿ ಮನೆ ಮೇಲೆ ಎಸಿಬಿಯ ಒಟ್ಟು 21 ಅಧಿಕಾರಿಗಳ 3 ಟೀಮ್ ದಾಳಿ ಮಾಡಿದ್ದು, ಆತನ ಅಕ್ರಮ ಆಸ್ತಿ ಮತ್ತು ಬಂಗಲೆ ಕಂಡು ಎಸಿಬಿ ಅಧಿಕಾರಿಗಳೇ ದಂಗಾಗಿದ್ದಾರೆ!

ಯಾರೀತ ಗಿರಿ?: ಜಿ.ವಿ.ಗಿರಿ ಓರ್ವ ಡಿ ಗ್ರೂಪ್ ನೌಕರ. ಬಿಬಿಎಂಪಿ ಚಾಲಕ ಮತ್ತು ಬಾಲಕಿಯರ ಹೈಸ್ಕೂಲ್, ಯಶವಂತಪುರದ ಮಾರಪ್ಪನಪಾಳ್ಯದಲ್ಲಿ ಕೆಲಸ. ಈತ ತಂದೆಯ ಸಾವಿನ ಬಳಿಕ ಅನುಕಂಪದ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಂಡಾತ. ಈತ ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು, ಕಟ್ಟಿರುವ ಮನೆ ಯಾವ ಅರಮನೆಗೂ ಕಡಿಮೆ‌ ಇಲ್ಲ. ಎಸಿಬಿ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ,‌ ಐದು ಐಷಾರಾಮಿ ಕಾರುಗಳನ್ನು ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ.

ಕುಬೇರ ಈ ಗಿರಿ!: ಗಿರಿ ಮನೆಯಲ್ಲಿ ಪರಿಶೀಲನೆ‌ ವೇಳೆ ಬೆಂಗಳೂರು ನಗರದಲ್ಲಿ 6 ವಾಸದ ಮನೆಗಳು, 4 ವಿವಿಧ ಕಂಪನಿ ಕಾರುಗಳು, 4 ದ್ವಿಚಕ್ರ ವಾಹನಗಳು, 8 ಕೆ.ಜಿ. ಬೆಳ್ಳಿ ವಸ್ತು, 1.18 ಲಕ್ಷ ನಗದು, 15 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತು

ಪತ್ತೆಯಾಗಿದೆ. ಅಪಾರ ಪ್ರಮಾಣದ ಆಸ್ತಿ ಕಂಡು ಎಸಿಬಿ ಎಸ್ಪಿ ಯತೀಶ್ ಚಂದ್ರ ಅವರೇ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಇನ್ನು, ಜಿ.ವಿ. ಗಿರಿಯನ್ನು ಎಸಿಬಿ ರೇಡ್ ಏಕೆಂದು ಪ್ರಶ್ನಿಸಿದ ಮಾಧ್ಯಮದವರಿಗೆ 'ಎಸಿಬಿಯವರನ್ನೇ ಕೇಳಿ, ಸಾಲ ಮಾಡಿ ಮನೆ ಕಟ್ಟಿರೋದು. ನನಗೆ ಇರೋದು ಇದೊಂದೇ ಮನೆ. ಎಸಿಬಿಯವರು ಯಾವ ಕಾರಣಕ್ಕೆ‌ ದಾಳಿ ಮಾಡಿದ್ದಾರೆ ಗೊತ್ತಿಲ್ಲ' ಎಂದು ನಗುತ್ತಲೇ ಉತ್ತರಿಸಿ ಮನೆ ಒಳಗೆ ನಡೆದಿದ್ದಾನೆ ಈ ಭೂಪ.

Edited By : Shivu K
Kshetra Samachara

Kshetra Samachara

24/11/2021 09:58 pm

Cinque Terre

662

Cinque Terre

0

ಸಂಬಂಧಿತ ಸುದ್ದಿ