ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ನಗರದಿಂದ ಮತ್ತೊಬ್ಬ ಬಾಲಕ ಕಾಣೆ

ಬೆಂಗಳೂರು: ಬೆಂಗಳೂರು ನಗರದಿಂದ ಮತ್ತೊಬ್ಬ ಬಾಲಕ ಕಾಣೆಯಾಗಿದ್ದಾನೆ. ಇತ್ತೀಚೆಗೆ ನಾಲ್ವರು ಮಕ್ಕಳು ನೋಟ್ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿದ್ದರು. ಈ ಪ್ರಕರಣ ನಂತರ ಸುಖಾಂತ್ಯ ಕಂಡಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಅಂತದ್ದೇ ಘಟನೆ ನಡೆದಿದೆ.

ಬೆಂಗಳೂರಿನ ಹೆಬ್ಬಾಳದ ಬೈರತಿಯಿಂದ 12 ವರ್ಷದ ಬಾಲಕ ಕಾಣೆಯಾಗಿದ್ದಾನೆ. ಇದೇ ತಿಂಗಳ 8 ರಂದು ಕಾಣೆಯಾದ ಬಾಲಕ ಇದುವರೆಗೂ ಪತ್ತೆಯಾಗಿಲ್ಲ. ಸ್ಥಳೀಯ ನಿವಾಸಿ ಸತೀಶ್ ಎಂಬುವರ ಪುತ್ರ ಬೆಳಿಗ್ಗೆ ಪೇಸ್ಟ್ ತರೋದಾಗಿ ಹೇಳಿ ಕಾಣೆಯಾಗಿದ್ದಾನೆ. ಎಲ್ಲೆಡೆ ಹುಡುಕಿ ಸಾಕಾದ ಪೋಷಕರು ಆತಂಕಗೊಂಡು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

24/10/2021 05:15 pm

Cinque Terre

886

Cinque Terre

0

ಸಂಬಂಧಿತ ಸುದ್ದಿ